ಸ್ಮಾರ್ಟ್‌ಕ್ಲಾಸ್‌ನಿಂದ ಮಕ್ಕಳ ಜ್ಞಾನ ಹೆಚ್ಚಳ

4 MDG 3
Published on

ಮುಂಡರಗಿ: ಡಾ. ಅನ್ನದಾನೀಶ್ವರ ಶಿವಯೋಗಿಗಳ ಆಶಯದಂತೆ ಅತಿ ಕಡಿಮೆ ಶುಲ್ಕದಲ್ಲಿ ಬಡ ಮಕ್ಕಳಿಗೆ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಸ್ಮಾರ್ಟ್ ತರಗತಿ ಮೂಲಕ ಪರಿಣಾಮಕಾರಿ ಶಿಕ್ಷಣ ಕೊಡಿಸುವ ಉದ್ದೇಶ ಹೊಂದಲಾಗಿದೆ. ಸ್ಮಾರ್ಟ್ ಕ್ಲಾಸ್‌ಗಳಿಂದ ಮಕ್ಕಳು ಹೆಚ್ಚಿನ ಜ್ಞಾನ ಹೊಂದಲಿದ್ದಾರೆ ಎಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಸ್ಮಾರ್ಟ್‌ಕ್ಲಾಸ್ ಬಗ್ಗೆ ಪಾಲಕರಿಗೆ ಮಾಹಿತಿ ಹಾಗೂ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಾಲಾ ಸುಧಾರಣಾ ಕಮಿಟಿ ಅಧ್ಯಕ್ಷ ಡಾ. ಅನ್ನದಾನಿ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಗ್ರುಪ್ ಕಂಪನಿ ಸಂಪನ್ಮೂಲ ವ್ಯಕ್ತಿ ತೋಶಿಫ್ ಸ್ಮಾರ್ಟ್‌ಕ್ಲಾಸ್ ಬಗ್ಗೆ ಪಾಲಕರಿಗೆ ಮಾಹಿತಿ ಹಾಗೂ ಶಿಕ್ಷಕರಿಗೆ ತರಬೇತಿ ನೀಡಿದರು. ಕಮಿಟಿ ಉಪಾಧ್ಯಕ್ಷ ಬಸವರಾಜ ಬಿಸನಳ್ಳಿ ಇತರರಿದ್ದರು. ಮುಖ್ಯಶಿಕ್ಷಕ ಆರ್.ವಿ. ಕಡಿವಾಲರ ಸ್ವಾಗತಿಸಿ, ಗಾಯತ್ರಿ ಸಜ್ಜನರ ಹಾಗೂ ಕಮಲ ಉಮಚಗಿ ನಿರೂಪಿಸಿದರು. ಮೇಘ ಮುರುಡಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net