ಸರ್ಕಾರಿ ಶಾಲೆಗೆ ಆಧುನಿಕ ವ್ಯವಸ್ಥೆ - ಪದ್ಮನಾಭ ಪೂಜಾರಿ ಸಣ್ಣಗುತ್ತು ಆಶಯ

PTR_24 MAR_2
Published on

ವಿಟ್ಲ: ಸರ್ಕಾರಿ ಸೌಲಭ್ಯಗಳ ಜತೆಗೆ ಊರಿನವರು ಮತ್ತು ಹಳೇ ವಿದ್ಯಾರ್ಥಿಗಳು ಕೊಡುಗೆಗಳನ್ನು ನೀಡಿದಾಗ ಶಾಲೆ ಅಭಿವೃದ್ಧಿಯಾಗುತ್ತದೆ. ಆಧುನಿಕ ವ್ಯವಸ್ಥೆಗಳನ್ನು ಶಾಲೆಯಲ್ಲಿ ಅಳವಡಿಸಿದಾಗ ವಿದ್ಯಾರ್ಥಿಗಳನ್ನು ಆಕರ್ಷಿಸುವ ಜತೆಗೆ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸಬಹುದು. ಊರಿನ ಶಾಲೆಗಳ ಜತೆಗೆ ಜನರ ಸಹಭಾಗಿತ್ವ ಇದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದು ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.

ಕಲ್ಲಜೇರ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ನೀಡುವ ಉದ್ದೇಶದಿಂದ ಹಳೇ ವಿದ್ಯಾರ್ಥಿಗಳು ಸುಮಾರು ೧ ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಪರಿಕರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಚಾಯಿತಿ ಸದಸ್ಯ ಸದಾಶಿವ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಯಶೋಧರ ಬಂಗೇರ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಫೀಕ್ ಕಲ್ಲಜೇರ, ನಿವೃತ್ತ ಮುಖ್ಯಶಿಕ್ಷಕಿ ರಾಜೀವಿ ಬಂಗೇರ, ನಿವೃತ್ತ ಶಿಕ್ಷಕಿ ಅಜಿತ ಕುಮಾರಿ, ಮುಖ್ಯಶಿಕ್ಷಕಿ ಗೀತಾ, ಸಿ.ಆರ್.ಪಿ. ಪುಷ್ಪಾ ಬಲ್ಲಾಳ್, ಹಿರಿಯ ವಿದ್ಯಾರ್ಥಿಗಳಾದ ಶಿವರಾಮ ಕಲ್ಲಜೇರ, ಮಸೂದ್, ರಮಿತ್, ಸಿದ್ಧಿಕ್, ತಸ್ವೀಪ, ಅಂಗನವಾಡಿ ಶಿಕ್ಷಕಿ ಲತಾ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net