ಆಟೋ ಚಾಲಕರಿಗೆ ಸ್ಮಾರ್ಟ ಕಾರ್ಡ್​

IMG-20250210-WA0030.jpg
Published on

ಹುಬ್ಬಳ್ಳಿ: ಇಲ್ಲಿಯ ಆಟೋ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ಮಾಡಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದರಂಗವಾಗಿ ನಡೆದ ಆಟೋ ಚಾಲಕರ ಹಾಗೂ ಮಾಲೀಕರ ನೋಂದಣಿ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಚಾಲನೆ ನೀಡಿದರು.

ಬ್ಯಾಡ್ಜ್ ಲೈಸನ್ಸ್ ಹೊಂದಿದ ವಾಣಿಜ್ಯ ವಾಹನ ಚಾಲಕರು ಮತ್ತು ಆಟೋ ಮಾಲಕರು, ಚಾಲಕರು ಹುಬ್ಬಳ್ಳಿಯ ನೀಲಿಜಿನ್ ರೋಡ್ ಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿರುವ ಹುಬ್ಬಳ್ಳಿ ಆಟೋ ರಿಕ್ಷಾ ಮಾಲಕರ ಚಾಲಕರ ಸಂಘದ ಕಚೇರಿಗೆ ಆಗಮಿಸಿ ದಾಖಲಾತಿಗಳನ್ನು ನೀಡಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ಪ್ರಧಾನ ಕಾರ್ಯದರ್ಶಿ ಮುರಳಿ ಇಂಗಳಹಳ್ಳಿ ತಿಳಿಸಿದರು.

ಮಹಾವೀರ್ ಬಿಲಾನ, ದಾವಲಸಾಬ್ ಕುರಟ್ಟಿ, ದಾವುದಲಿ ಶೇಕ್, ಮಂಜುನಾಥ ನಂದಿಹಾಳ, ರಾಜೇಶ್ ಬಿಜ್ವಾಡ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net