

ಕವಿತಾಳ: ಪಟ್ಟಣದ ಕನ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಶಿಕ್ಷಕರ ದಿನವನ್ನು ಶುಕ್ರವಾರ ಆಚರಿಸಲಾಯಿತು. ಶಾಲಾ ಸಂಸತ್ ಮಂತ್ರಿ ಮಂಡಲದ ಮುಖ್ಯಮಂತ್ರಿ ಅಕ್ಷತಾ ಶಿವಲಿಂಗಪ್ಪಗೌಡ ಕಾರ್ಯಕ್ರಮ ಉದ್ಘಾಟಿಸಿದರು.
ಸ್ಮಾರ್ಟ್ ಬ್ರಿಡ್ಜ್ ಮಾದರಿ ತಯಾರಿಸಿದ ವಿದ್ಯಾರ್ಥಿನಿ ಪ್ರೀತಿ ಮಾತನಾಡಿ, ವಿಪರೀತ ಮಳೆ ಬಂದಾಗ ಸೇತುವೆ ದಾಟಲಾಗುವುದಿಲ್ಲ ಸ್ಮಾರ್ಟ್ ಬ್ರಿಡ್ಜ್ ತಂತ್ರಜ್ಞಾನ ಅಳವಡಿಸಿಕೊಂಡರೆ ವಿಪರೀತ ಮಳೆಯಲ್ಲಿ ತುಂಬಿದ ಸೇತುವೆಯನ್ನು ದಾಟಬಹುದು ಎಂದರು. ಪ್ರವಾಹ ಮುನ್ಸೂಚನೆ ನೀಡುವ ಮಾದರಿಯನ್ನು ಅಂಬಿಕಾ ಮತ್ತು ಭೂಮಿಕಾ, ಸೋಲಾರ್ ವ್ಯವಸ್ಥೆಯ ಮಾದರಿಯನ್ನು ಬಿಂದುಶ್ರೀ ಮತ್ತು ಲಕ್ಷ್ಮೀದೇವಿ, ಬೆಸಸಂಖ್ಯೆ ಮತ್ತು ಸಮ ಸಂಖ್ಯೆಯ ಮಾದರಿಯನ್ನು ಭಾವನಾ ಮತ್ತು ಶ್ವೇತಾ, ಹೈಡ್ರೋಫೋನಿಕ್ ಫಾರ್ಮ್ ಮಾದರಿಯನ್ನು ಚೈತ್ರಾ ಮತ್ತು ಅನಿತಾ ಪ್ರದರ್ಶಿಸಿದರು. ವಿದ್ಯಾರ್ಥಿನಿಯರು 21 ಮಾದರಿಗಳನ್ನು ಪ್ರದರ್ಶಿಸಿದರು.
ಮುಖ್ಯಶಿಕ್ಷಕಿ ಮಂಜುಳಾ ಅಂಗಡಿ, ಶಿಕ್ಷಕರಾದ ಗಿರೀಶ ಅಂಗಡಿ, ಸಿದ್ದರಾಮೇಶ್ವರ, ಶಂಕ್ರಯ್ಯಸ್ವಾಮಿ, ಇಸ್ಮಾಯಿಲ್, ಮಂಜುನಾಥ, ರಾಮಣ್ಣ, ಸಮೀನಾ ಬಾನು, ಚಂದ್ರಕಲಾ, ಶಾರದಾ, ಬಸಮ್ಮ, ಪಾಲಕರಿದ್ದರು.