ಸರ್ಕಾರಿ ಶಾಲೆಗೆ ಸ್ಮಾರ್ಟ್​ ಬೋರ್ಡ್​ ದೇಣಿಗೆ

Smart board donation to government school
ವಿಜಯಪುರದ ಗಾಂಧಿವೃತ್ತದ ಬಳಿಯ ಸರ್ಕಾರಿ ಕೆಪಿಎಸ್​, ಕೆಜಿಎಂಪಿಎಸ್​ ನಂ. 1 ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿಶ್ವನಾಥ ಸಿಂದಗಿ ದಂಪತಿಗೆ ಸನ್ಮಾನಿಸಲಾಯಿತು. ರಾಜಶೇಖರ ಮಗಿಮಠ, ಎಸ್​.ಎಂ. ತೋಟದ, ಎಸ್​.ಎಸ್​. ಬಬಲೇಶ್ವರ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಗಾಂಧಿವೃತ್ತ ಬಳಿಯ ಸರ್ಕಾರಿ ಕೆಪಿಎಸ್​, ಕೆಜಿಎಂಪಿಎಸ್​ ನಂ.1 ಶಾಲೆಗೆ ಮುಂಬಯಿ ಮೂಲದ ಶೇಟ್​ ತಾಪಿದಾಸ, ತುಳಸಿದಾಸ ವಜ್ರದಾಸ ಚಾರಿಟೆಬಲ್​ ಟ್ರಸ್ಟ್​ ವತಿಯಿಂದ ಒಂದು ಲಕ್ಕೂ ಅಧಿಕ ಮೌಲ್ಯದ ಸ್ಮಾರ್ಟ್​ ಬೋರ್ಡ್​ ಹಾಗೂ ಪ್ರೋಜೆಕ್ಟರ್​ ದೇಣಿಗೆ ನೀಡಲಾಯಿತು.

ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಸರ ದಿನಾಚರಣೆ ನಿಮಿತ್ತ ಟ್ರಸ್ಟ್​ ಕೋ&ಆರ್ಡಿನೇಟರ್​ ವಿಶ್ವನಾಥ ಸಿಂದಗಿ ಸ್ಮಾಟ್​ಬೋರ್ಡ್​ ಸೇರಿ ಮುಂತಾದ ಸಲಕರಣೆಗಳನ್ನು ಹಸ್ತಾಂತರಿಸಿ, ಸ್ಮಾರ್ಟ್​ ಬೋರ್ಡ್​ ಕುರಿತು ಮಕ್ಕಳಿಗೆ ತಿಳಿಸುವ ಜತೆಗೆ ಸಲಹೆ ನೀಡಿದರು.

ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಶಾಲೆ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.

ಚಾರಿಟೆಬಲ್​ ಟ್ರಸ್ಟ್​ನ ಕೋ&ಆರ್ಡಿನೇಟರ್​ ವಿಶ್ವನಾಥ ಸಿಂದಗಿ ದಂಪತಿಗೆ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಗುರುಮಾತೆ ಎಸ್​.ಎಂ. ತೋಟದ, ಎಸ್​.ಎಸ್​. ಬಬಲೇಶ್ವರ, ಎಸ್​.ಎಂ. ಮುಳವಾಡ, ಎಸ್​.ಎನ್​. ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net