

ಮುಂಡರಗಿ: ಪಟ್ಟಣದ ಎಸ್.ಎಂ. ಭೂಮರಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.12ರಂದು ಬೆಳಗ್ಗೆ 11ಗಂಟೆಗೆ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮವು ಆಯೋಜಿಸಲಾಗಿದೆ ಎಂದು ಶಾಲಾ ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಶಿಳ್ಳಿನ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಲ್ಟಿಮೀಡಿಯಾ ತರಗತಿ ಉದ್ಘಾಟಿಸುವರು. ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸುವರು’ ಎಂದರು.
ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಜಿ.ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ದಾನಿಗಳಾದ ರಮೇಶಪ್ಪ ಭೂಮರಡ್ಡಿ, ಕನ್ಯಾಕುಮಾರಿ ಭೂಮರಡ್ಡಿ, ಲಿಂಗರಾಜಗೌಡ ಪಾಟೀಲ ಎಂದು ತಿಳಿಸಿದರು.
ದಾನಿಗಳ ಸಹಕಾರದಿಂದ ಶಾಲೆಯಲ್ಲಿ ಉದ್ಯಾನ, ನವರಂಗ ವೇದಿಕೆ, ಕೈತೊಳೆಯು ಕೊಠಡಿ, ಕಾಂಪೌಂಡ್ ಗ್ರಿಲ್ ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ವಿರೂಪಾಕ್ಷಪ್ಪ ಬಾರಕೇರ, ಬೆಳ್ಳಿ ಮಹೋತ್ಸವ ಸಮಿತಿ ಉಪಾಧ್ಯಕ್ಷ ವೀರಣ್ಣ ಮಡಿವಾಳರ, ಕಾರ್ಯದರ್ಶಿ ಎಂ.ಪಿ. ಶೀರನಹಳ್ಳಿ, ಸದಸ್ಯರಾದ ಅಶೋಕ ಹಂದ್ರಾಳ, ದುರುಗಪ್ಪ ರಾಮೇನಹಳ್ಳಿ, ಲಕ್ಷ್ಮಪ್ಪ ಮಲ್ಲಾರ್ಜಿ, ಪರುಶುರಾಮ ಡಂಬಳ, ಮುಖ್ಯಶಿಕ್ಷಕ ಬಿ.ಕೆ. ಮಾದರ, ಶಿಕ್ಷಕ ಎಸ್.ಎನ್.ಪಾಟೀಲ ಇತರರು ಇದ್ದರು.