ಶಾಸಕ ಹೂಲಗೇರಿಗೆ ತರಾಟೆ ತೆಗೆದುಕೊಂಡ ರಾಮತ್ನಾಳ ಗ್ರಾಮದ ಮಹಿಳೆಯರು

Ramathnala Villagers
ಕೊಳಚೆ ನೀರಿನಿಂದ ಉಂಟಾಗುವ ರೋಗಗಳು ತಡೆಯಲು ಯಾರೂ ಸ್ಪಂದಿಸುತ್ತಿಲ್ಲ ಎಂದು ಮುದಗಲ್ ಸಮೀಪದ ರಾಮತ್ನಾಳದಲ್ಲಿ ಮಹಿಳೆಯರು ಶಾಸಕ ಡಿಎಸ್.ಹೂಲಗೇರಿಗೆ ಶುಕ್ರವಾರ ತರಾಟೆಗೆ ತೆಗೆದುಕೊಂಡರು.
Published on

ಮುದಗಲ್: ಗ್ರಾಮದಲ್ಲಿ ಚರಂಡಿ ಇಲ್ಲದೆ ಕೊಳಚೆ ನಿರ್ಮಾಣವಾಗಿ ರೋಗಗಳು ಹರಡುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಸಮೀಪದ ರಾಮತ್ನಾಳ ಗ್ರಾಮದಲ್ಲಿ ಶಾಸಕ ಡಿಎಸ್.ಹೂಲಗೇರಿಗೆ ಮಹಿಳೆಯರು ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ಗ್ರಾಮದ ಎಸ್ಸಿ ಕಾಲನಿಯಲ್ಲಿ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿದೆ. ಮನೆಯಲ್ಲಿ ಮೂಗು ಮುಚ್ಚಿಕೊಂಡು ಕೂಡುವಂತಾಗಿದೆ. ಈ ಬಗ್ಗೆ ನಾವು ಯಾರಿಗೆ ಹೇಳೊದು? ನೀವು ಎರಡು ವರ್ಷದ ಹಿಂದೆ ಚುನಾವಣೆ ಸಂದರ್ಭ ಮತ ಕೇಳಲು ನಮ್ಮೂರಿಗೆ ಬಂದವರು ಈವಾಗ ಬಂದಿದ್ದೀರಿ. ಕಳೆದ ವರ್ಷ ನಿರ್ಮಿಸಿದ ಸಿಸಿ ರಸ್ತೆ ಮೇಲೆಯೇ ಮತ್ತೊಮ್ಮೆ ರಸ್ತೆ ಮಾಡುವ ಬದಲಿಗೆ ಚರಂಡಿ, ಶೌಚಗೃಹ ನಿರ್ಮಿಸಿದರೆ ಅನುಕೂಲವಾಗುತ್ತದೆ. ಆದರೆ, ಸರ್ಕಾರದ ಹಣ ಕೇವಲ ಹಣ ದುರ್ಬಳಕೆ ಮಾಡುವುದಕ್ಕೆ ಮತ್ತೆ ಸಿಸಿ ರಸ್ತೆ ಮಾಡುತಿದ್ದಿರಿ ಎಂದು ನಿವಾಸಿಗಳಾದ ಪಾರ್ವತಮ್ಮ, ರೇಣುಕಮ್ಮ, ದುರಗಮ್ಮ ಸೇರಿ ಅನೇಕ ಮಹಿಳೆಯರು ಶಾಸಕರಿಗೆ ತರಾಟೆಗೆ ತೆಗೆದುಕೊಂಡರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಅಗತ್ಯ ಸೌಕರ್ಯ ಕಲ್ಪಿಸುವುದಾಗಿ ಶಾಸಕ ಡಿಎಸ್.ಹೂಲಗೇರಿ ಸಮಜಾಯಿಸಿ ನೀಡಲು ಪ್ರಯತ್ನಿಸಿದರು. ಆದರೆ, ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಶಾಸಕ ಸ್ಥಳದಿಂದ ಹೊರಟು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net