

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಗೋಸಾವಿ ಸ್ಲಂ ಪ್ರದೇಶದ ಅಲೆಮಾರಿ ಸಮುದಾಯದ ಕುಟುಂಬಗಳು ಸುಮಾರು 70 ವರ್ಷಗಳಿಂದ ವಸತಿ ಹಾಗೂ ಯಾವುದೇ ನಾಗರೀಕ ಸೌಲಭ್ಯಗಳು ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಸಮಿತಿ ನಗರಸಭೆ ಪೌರಾಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಸಮಿತಿ ಅಧ್ಯಕ್ಷ ಇಮ್ತಿಯಾಜ ಮಾನ್ವಿ ಮಾತನಾಡಿ, ಗೋಸಾವಿ ಅಲೆಮಾರಿ ಸಮುದಾಯದ ಕುಟುಂಬಗಳು ಕಳೆದ ಹಲವು ದಶಕಗಳಿಂದ ಚಿಂದಿ ಆಯುವ ಹಾಗೂ ಅಸಂಟಿತ ಕಾಮಿರ್ಕರಾಗಿ ಕೆಲಸ ಮಾಡುತ್ತ ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲದೇ ಜೀವನ ಸಾಗಿಸುತ್ತಿದ್ದಾರೆ. ಜನಪ್ರತಿನಿಧಿಗಳು ಆಶ್ರಯ ಯೋಜನೆ ಹಾಗೂ ಅನೇಕ ವಸತಿ ಯೋಜನೆಯಲ್ಲಿ ಈಗಾಗಲೇ ಸಾವಿರಾರು ಮನೆಗಳನ್ನು ಹಂಚಿಕೆ ಮಾಡಿದ್ದು, ಈ ಸಮುದಾಯವನ್ನು ನಿರ್ಲಸಿದ್ದಾರೆ. ಜಿಲ್ಲಾ ಸ್ಲಂ ಸಮಿತಿ ಕಳೆದ ಹಲವು ವರ್ಷಗಳಿಂದ ಈ ಸಮುದಾಯಕ್ಕೆ ವಸತಿ ಸೌಲಭ್ಯ ಹಾಗೂ ನಾಗರಿಕ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸುತ್ತಿದೆ. ಆದರೂ ಸಹ ಇಂತಹ ನಿಜವಾದ ನಗರ ವಂಚಿತ ಸಮುದಾಯಗಳಿಗೆ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ವಿಲರಾಗಿದ್ದಾರೆ ಎಂದು ಆರೋಪಿಸಿದರು.
ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಶಂಕ್ರಪ್ಪ ರೋಣ, ವಿಶಾಲ ಹಿರೇಗೌಡ್ರ, ವಂದನಾ ಶ್ಯಾವಿ, ಮಕ್ತುಮ ಮುಲ್ಲಾನವರ, ಇಬ್ರಾಹಿಂ ಮುಲ್ಲಾ, ಮಲೇಶಪ್ಪ ಕಲಾಲ, ಪ್ರಕಾಶ ಹಡಗಲಿ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ದುರ್ಗಪ್ಪ ಮಣಿವಡ್ಡರ, ಮಂಜುನಾಥ ಶ್ರೀಗಿರಿ, ಶವಾನಂದ ಶಿಗ್ಲಿ ಹಲವರು ಇದ್ದರು.