ಮತ ಸೆಳೆಯುವವರಿಗೆ ಹೈಕಮಾಂಡ್‌ ಅವಕಾಶ ಕಲ್ಪಿಸಲಿ: ಸಚಿವ ಸತೀಶ್‌ ಜಾರಕಿಹೊಳಿ

IMG-20241113-WA0035.jpg
Published on

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತದೆ. ಪಕ್ಷಕ್ಕೆ ಪೂರ್ಣ ಪ್ರಮಾಣದ ರಾಜ್ಯಾಧ್ಯಕ್ಷರು ಬೇಕೆ ಬೇಕು. ಮತ ಸೆಳೆಯುವವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಮಾತ್ರ 2028ರಲ್ಲೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಕುವೆಂಪು ನಗರದ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತು ಹೈಕಮಾಂಡ್ ನಿರ್ಧಾರಿಸುತ್ತದೆ. ದೆಹಲಿಗೆ ಹೋಗಿ ಬಂದ್ಮೇಲೆ ಈ ಬಗ್ಗೆ ಸುಳಿವು ಸಿಗಬಹುದು. ಅಧಿವೇಶನ ನಂತರ ದೆಹಲಿ ಹೋಗಿ ಬರುತ್ತೇನೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಸಣ್ಣ ಹುದ್ದೆಯಲ್ಲ, ಹೀಗಾಗಿ ಹೈಕಮಾಂಡ್ ಸೂಚನೆ ಬಂದ್ಮೇಲೆ ಚರ್ಚೆ ಮಾಡಬೇಕಾಗುತ್ತೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕಾದರೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌

ಇದರ ಬಗ್ಗೆ ಚರ್ಚಿಸಬೇಕು. ನಂತರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಧ್ಯಕ್ಷರಾಗಲೂ ಮೂರು ನಾಲ್ಕು ಜನ ರೇಸ್ ನಲ್ಲಿ ಇದ್ದೆ ಇರುತ್ತಾರೆ. ಯಾರು ಪಕ್ಷಕ್ಕೆ ವೋಟ ತರುತ್ತಾರೆ, ಯಾರಿಗೆ ವೋಟ ಸೆಳೆಯುವ ಶಕ್ತಿ ಇದೆ ಅಂತವರಿಗೆ ಪಕ್ಷ ಅವಕಾಶ ನೀಡಬೇಕೆಂದು ಇದೇ ವೇಳೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net