ಡಿಸಿಸಿ ಬ್ಯಾಂಕ್ ಚುನಾವಣೆ; ಜಾರಕಿಹೊಳಿ ಸಹೋದರರು ‌ಮೇಲುಗೈ

20251013_162354.jpg
Published on

ಬೆಳಗಾವಿ: ರಾಜ್ಯ ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ತೀವ್ರ ಕೂತುಹಲ‌ ಮೂಡಿಸಿದ್ದ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸಹೋದರರು ಮೇಲುಗೈ ಸಾಧಿಸಿದ್ದಾರೆ.

ಡಿಸಿಸಿ ಬ್ಯಾಂಕಿನ‌16 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಅದರಲ್ಲಿ ಜಾರಕಿಹೊಳಿ ಸಹೋದರ ಪ್ಯಾನೆಲ್ ನಲ್ಲಿಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ವಿಶ್ವಾಸ ವೈದ್ಯ, ವಿರೂಪಾಕ್ಷ ಮಾಮನಿ, ಅರವಿಂದ ಪಾಟೀಲ, ರಾಹುಲ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ,ನೀಲಕಂಠ ಕಪ್ಪಲಗುದ್ದಿ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.‌ಮತ್ತೊಂದೆಡೆ ಯಾರೊಂದಿಗೆ ಗುರುತಿಸಿಕೊಳ್ಳದೆ ಸ್ಪರ್ಧಿಸಿದ್ದ ಶಾಸಕರಾದ ರಾಜು ಕಾಗೆ‌, ಗಣೇಶ ಹುಕ್ಕೇರಿ ಅವಿರೋಧ ಆಯ್ಕೆಯಾಗಿದ್ದಾರೆ.

ಒಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರದ ಚುಕ್ಕಾಣಿ ಹಿಡಿಯಲು‌ ಬಹುಮತಕ್ಕೆ 9 ಜನ ಸದಸ್ಯರ ಬೆಂಬಲ ಅಗತ್ಯ. ಹೀಗಾಗಿ ಜಾರಕಿಹೊಳಿ ಸಹೋದರರು ತಮ್ಮ‌ಬೆಂಬಲಿತ 13ಜನ ಸದಸ್ಯರ‌ ಪೈಕಿ 7ಜನರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಅವಿರೋಧವಾಗಿ ಆಯ್ಕೆಯಾಗಿದ್ದ ಇಬ್ಬರು ಕೂಡ ಜಾರಕಿಹೊಳಿ ಪ್ಯಾನೆಲ್ ನಲ್ಲಿ ಗುರುತಿಸಿಕೊಳ್ಳುವ‌ ಮೂಲಕ ಜಾರಕಿಹೊಳಿ ಸಹೋದರರು ಮೇಲು ಗೈ ಸಾಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net