ಕಾಲು ಜಾರಿ ಹೊಳೆಗೆ ಬಿದ್ದು ಸಾವು

Death
Published on

ಸುಳ್ಯ: ಮನೆಯ ಸಮೀಪವಿರುವ ಹೊಳೆಗೆ ಶುಕ್ರವಾರ ಸ್ಥಳೀಯ ನಿವಾಸಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಸಂಭವಿಸಿದೆ. ಅಡ್ಕಬಳೆಯ ಚನಿಯ (50) ಮೃತಪಟ್ಟವರು. ಬೆಳಗ್ಗೆ 7 ಗಂಟೆ ವೇಳೆ ಹೊಳೆಗೆ ತೆರಳಿದ್ದು, ಅಕಸ್ಮಾತ್ ಕಾಲುಜಾರಿ ಹೊಳೆಗೆ ಬಿದ್ದಿದ್ದಾರೆ. ಇದನ್ನು ಕಂಡ ಮನೆಯವರು ಕಿರುಚಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನ್ಸ ಮುಗೇರ ಅವರು ತಕ್ಷಣವೇ ನೀರಿಗೆ ಹಾರಿ ಅವರನ್ನು ಮೇಲೆತ್ತಿದ್ದಾರೆ. ಆದರೆ ಚನಿಯ ಅದಾಗಲೇ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net