ಮಲಗಿದ್ದವರ ಜೇಬು ಕತ್ತರಿಸಿ 95 ಸಾವಿರ ರೂ. ಕಳ್ಳತನ

Thief
Published on

ಶಿಗ್ಗಾಂವಿ: ಭತ್ತ ಹಾಗೂ ಸೋಯಾಬಿನ್​ ಕಟಾವು ಮಾಡಲು ಬಂದವರು ಮಲಗಿದ್ದಾಗ ಅವರ ಜೇಬು ಕತ್ತರಿಸಿ 95 ಸಾವಿರ ರೂ. ಕಳ್ಳತನ ಮಾಡಿಕೊಂಡು ಹೋದ ಘಟನೆ ಪಟ್ಟಣದ ಪೆಟ್ರೋಲ್​ ಬಂಕ್​ವೊಂದರ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ರಾಣೆಬೆನ್ನೂರ ತಾಲೂಕಿನ ನದಿಹರಳಹಳ್ಳಿಯ ಕಾತಿರ್ಕ ಬಸಪ್ಪ ಮಾಕನೂರ ಹಾಗೂ ಯುವರಾಜ ಮುದಕಪ್ಪನವರ ಎಂಬುವರ ಹಣ ಕಳ್ಳತನ ಮಾಡಿರುವುದು.
ಇವರು ಭತ್ತ ಹಾಗೂ ಸೋಯಾಬಿನ್​ ಕಟಾವು ಮಾಡುವ ಮಷಿನ್​ ಇಟ್ಟುಕೊಂಡು ಪೆಟ್ರೋಲ್​ ಬಂಕ್​ ಬಳಿ ಮಲಗಿಕೊಂಡಿದ್ದರು. ಈ ಸಮಯದಲ್ಲಿ ಯಾರೋ ಖದೀಮರು ಇವರ ಜೇಬು ಕಟ್​ ಮಾಡಿಕೊಂಡು ಅದರಲ್ಲಿದ್ದ 95 ಸಾವಿರ ರೂ. ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net