

ರಾಯಚೂರು ಪ್ರಪಂಚದ ವಿವಿಧ ದೇಶಗಳಲ್ಲಿ ಜೀತ ಪದ್ಧತಿ ಕಂಡುಬರುತ್ತದೆ. ಅನಿಷ್ಠ ಜೀತ ಪದ್ಧತಿಯ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಽÃಶರಾದ ಎಚ್.ಎ.ಸ್ವಾತಿಕï ಅವರು ಹೇಳಿದರು.
ನಗರದ ಜಿ¯್ಲÁಽಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿ¯್ಲÁ ಕಾನೂನು ಸೇವೆಗಳ ಪ್ರಾಽಕಾರ, ಜಿ¯್ಲÁಡಳಿತ, ಜಿ¯್ಲÁ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ-೨೦೨೫ರ ನಿಮಿತ್ತ ಜಿ¯್ಲÁ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿನ ಅನೇಕ ಸಮಸ್ಯೆಗಳಲ್ಲಿ ಜೀತಪದ್ಧತಿಯೂ ಒಂದು. ಇದು ಮಾನವೀಯತೆಗೆ ಕಳಂಕ, ಶಾಪವಾಗಿ ಪರಿಣಮಿಸಿದೆ. ಜೀತ ಪದ್ಧತಿ (ರದ್ಧತಿ) ಕಾಯ್ದೆ ೧೯೭೬ ರನ್ವಯ ಕಾರ್ಮಿಕರನ್ನು ಜೀತಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.
ನಮ್ಮ ಸಂವಿಧಾನವು ನಾಗರಿಕರಿಗೆ ಗೌರವಯುತ ಜೀವನ ನಡೆಸಲು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಮಾನವನ ಗೌರವಯುತ ಜೀವನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜೀತ ಪದ್ಧತಿಯ ನಿಯಂತ್ರಣವನ್ನು ಒಂದು ಸಾಮಾಜಿಕ ಬದ್ಧತೆಯನ್ನಾಗಿ ತೆಗೆದುಕೊಂಡು ಅನಿಷ್ಠ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರು ಕೈ ಜೋಡಿಸುವ ಅಗತ್ಯವಿದೆ ಅದಕ್ಕಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಗಾರದ ಸದುಪಯೋಗ ಪಡೆದುಕೊಂಡು ಅಽಕಾರಿಗಳು ಜೀತ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕೆಂದು ಹೇಳಿದರು.
ಡಿವೈಎಸ್ಪಿ ಶಾಂತಮೂರ್ತಿ ಮಾತನಾಡಿ, ಆರ್ಥಿಕ ಸ್ಥಿತಿ ಕಡಿಮೆಯಾದಾಗ ಜೀತ ಪದ್ಧತಿಯು ಉಲ್ಬಣಗೊಳ್ಳುತ್ತದೆ. ಪೂರ್ವಜರ ಕಾಲದಲ್ಲಿ ಜೀತ ಪದ್ದತಿಯು ಆಳವಾಗಿ ಬೇರೂರಿತ್ತು. ಸ್ವಾತಂತ್ರ‍್ಯ ನಂತರ ಗಣನೀಯವಾಗಿ ಕಡಿಮೆಯಾಗಿದೆ. ೧೪ ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಕಾನೂನು ಬಾಹಿರ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯ ಎಂದರು.
ಸAಪನ್ಮೂಲ ವ್ಯಕ್ತಿಗಳಾಗಿ ಜಿ¯್ಲÁ ಕಾನೂನು ಸೇವೆಗಳ ಪ್ರಾಽಕಾರದ ಪೆನಾಲï ಶಿವಕುಮಾರï ಮ್ಯಾಗಳಮನಿ ಮಾತನಾಡಿ, ದೇಶದಲ್ಲಿ ನಾಲ್ಕು ಸಾವಿರಕ್ಕೂ ಅಽಕ ಕಾನೂನುಗಳು ಜÁರಿಯಲ್ಲಿವೆ. ಇವುಗಳು ಸಮಾಜವನ್ನು ಸರಿ ದಾರಿಗೆ ತರಲು ಸಹಕಾರಿಯಾಗಿದೆ. ಜೀತ ಪದ್ಧತಿ ವ್ಯವಸ್ಥೆಯು ವಿಶ್ವಕ್ಕೆ ಅಂಟಿಕೊAಡ ದೊಡ್ಡ ಪಿಡುಗಾಗಿದೆ. ಜೀತ ಪದ್ಧತಿ ನಿರ್ಮೂಲನೆಗಾಗಿ ೨೭ ಕಾಲಂಗಳ ಜೀತಪದ್ಧತಿ ನಿರ್ಮೂಲನೆಗೆ ಕಾಯ್ದೆ ಜÁರಿಗೆ ಬಂದಿದೆ. ವ್ಯಕ್ತಿಯನ್ನು ಬಲವಂತವಾಗಿ ಬಿಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಆ ರೀತಿ ಮಾಡಿದ್ದಲ್ಲಿ ಜೀತ ಪದ್ಧತಿಯಾಗುತ್ತದ ಎಂದರು.
ಈ ಸಂದರ್ಭದಲ್ಲಿ ಅಪರ ಜಿ¯್ಲÁಽಕಾರಿ ಶಿವಾನಂದ, ಜಿಪಂ ಉಪ ಕಾರ್ಯದರ್ಶಿಗಳಾದ ಶಶಿಕಾಂತ್ ಶಿವಪೂರ, ಜಿ¯್ಲÁ ಕಾರ್ಮಿಕ ಅಽಕಾರಿ ಆರತಿ, ತಹಶೀಲ್ದಾರ್‌ಗಳಾದ ಚೆನ್ನಮಲ್ಲಪ್ಪ ಘಂಟಿ, ಅರುಣï ಕುಮಾರï ದೇಸಾಯಿ, ಯುವಜನ ಮತ್ತು ಕ್ರೀಡೆ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರೇಶ ನಾಯಕ, ಸಿಡಾಕï ನಿರ್ದೇಶಕರಾದ ಜಿ.ಯು.ಹುಡೇದï, ಜಿ¯್ಲÁ ಕೈಗಾರಿಕಾ ಅಽಕಾರಿಯಾದ ಬಸವರಾಜ ಯರಕಂಚಿ, ಡಿಎಚ್‌ಓ ಡಾ. ಸುರೇಂದ್ರಬಾಬು, ಜಿ¯್ಲÁ ಉದ್ಯೋಗಾಽಕಾರಿ ನವೀನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಽಕಾರಿï ಅಶೋಕ ಸೇರಿದಂತೆ ಇತರರು ಇದ್ದರು.