5 ರಾಜ್ಯಗಳಲ್ಲಿ 11 ಸಾವಿರ ಕಿಮೀ ಸಂಚರಿಸಿ ಗೋ ಕಳ್ಳರನ್ನು ಹಿಡಿದ ಪೊಲೀಸರು

Honnavara
Published on

ಕಾರವಾರ: ಗರ್ಭಿಣಿ ಹಸುವನ್ನು ವಧೆ ಮಾಡಿ, ಕಳೆದ ಸುಮಾರು 45 ದಿನಗಳಿಂದ ಕಣ್ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಕೊನೆಗೂ ಹೆಡೆಮುರಿಕಟ್ಟಿದ್ದಾರೆ.

ಭಟ್ಕಳದ ವಾಸಿಂ ಹಾಗೂ ಮುಜಾಮಿಲ್ ಬಂಧಿತರು. ವಾಸಿಂನನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದ್ದು, ಮುಜಾಮಿಲ್‌ನನ್ನು ಭಟ್ಕಳದಲ್ಲೇ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ. ಇಬ್ಬರೂ ಕುಡಿಯುವ ಚಟ ಹೊಂದಿದ್ದು, ಅದಕ್ಕೆ ಹಣ ಹೊಂದಿಸುವ ಸಲುವಾಗಿ ಗೋ ವಧೆ ಮಾಡುತ್ತಿದ್ದರು. ವಾಸಿಂ ವಿರುದ್ಧ 22 ಹಾಗೂ ಮುಆಮಿಲ್ ಮೇಲೆ 8 ಬೇರೆ ಪ್ರಕರಣಗಳಿವೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಜನವರಿ 18 ರಂದು ಹೊನ್ನಾವರ ಸಾಲ್ಕೋಡು ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಗರ್ಭ ಧರಿಸಿದ ಹಸುವನ್ನು ಕೊಂದು ಮಾಂಸವನ್ನು ಕೊಂಡೊಯ್ಯಲಾಗಿತ್ತು. ಪ್ರಕರಣ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಕೋಮು ಸೂಕ್ಷ÷್ಮ ವಿಷಯವಾಗಿತ್ತು. ಜ.19 ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳಾದ ಫೈಸಾ ಹಾಗೂ ತೌಫಿಕ್ ಎಂಬುವವರನ್ನು ಬಂಽಸಲಾಗಿತ್ತು. ಆದರೆ, ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದರಿಂದ ಕಾಲಿಗೆ ಗುಂಡು ಹಾರಿಸಲಾಗಿತ್ತು ಎಂದು ಎಸ್‌ಪಿ ತಿಳಿಸಿದರು.

1 ಲಕ್ಷ ಬಹುಮಾನ:

ಪ್ರಕರಣದ ಪ್ರಮುಖ ಆರೋಪಿಗಳಾದ ಮುಜಾಮಿಲ್ ಹಾಗೂ ವಾಸಿಂ ಅವರನ್ನು ಪತ್ತೆ ಮಾಡಿದವರಿಗೆ ಪೊಲೀಸ್ ಇಲಾಖೆಯಿಂದ 50 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಖಾಸಗಿ ವ್ಯಕ್ತಿಯೊಬ್ಬರು 50 ಸಾವಿರ ರೂ. ಬಹುಮಾನ ಘೋಷಿಸಿದ್ದರು. ವಿಶೇಷ ತಂಡ ರಚಿಸಿ, ಆರೋಪಿತರಿಬ್ಬರು ಪ್ರತ್ಯೇಕವಾಗಿ ಓಡಾಡ ನಡೆಸಿರುವ ಸುಳಿವು ಪಡೆದು, 5 ರಾಜ್ಯಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಸುಮಾರು 130 ಸ್ಥಳಗಳ ಸಿಸಿ ಕ್ಯಾಮರಾ ಪರಿಶೀಲಿಸಿ, 310 ಕ್ಕೂ ಅಽಕ ಜನರನ್ನು ವಿಚಾರಣೆ ನಡೆಸಲಾಗಿತ್ತು. ಸದ್ಯ ಇಬ್ಬರು ಇರುವ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳಿಬ್ಬರಿಗೆ ತಲಾ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಎಸ್‌ಪಿ ಎಂ. ನಾರಾಯಣ ತಿಳಿಸಿದರು.

ಎಎಸ್‌ಪಿ ಜಗದೀಶ ಎಂ., ಭಟ್ಕಳ ಡಿವೈಎಸ್‌ಪಿ ಮಹೇಶ ಕೆ., ಸಂತೋಷ ಕಾಯ್ಕಿಣಿ, ಸಿದ್ದರಾಮೇಶ್ವರ ಎಸ್., ಪಿಎಸ್‌ಐ ರಾಜಶೇಖರ, ಮಮತಾ ನಾಯ್ಕ, ಮಂಜುನಾಥ, ಸಿಬ್ಬಂದಿ ಅಬ್ದುಲ್ ಹಮೀದ್, ಕೃಷ್ಣ ಗೌಡ, ನಾಗರಾಜ ಮೊಗೇರ, ದಿನೇಶ ನಾಯ್ಕ, ಲೋಕೇಶ ಕತ್ತಿ, ಮಂಜುನಾಥ ಲಕ್ಮಾಪುರಿ, ಮೈನುದ್ದೀನ್ ಪಾಟ್ನಿ, ಆನಂದ ಲಮಾಣಿ, ವಿಠ್ಠಲ ಹಳ್ಳಿ, ಮಲ್ಲಿಕಾರ್ಜುನ ಸರದಾರ, ಡಿಸಿಆರ್ ವಿಭಾಗದ ಉದಯ ಗುನಗಾ, ಬಬನ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಡೀ ತಂಡಕ್ಕೆ ಬಹುಮಾನ ಘೋಷಿಸುವುದಾಗಿ ಎಸ್‌ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net