ಮೈಸೂರಿನಲ್ಲಿ ಪ್ರಕಾಶಕ ಟಿ.ಎಸ್. ಛಾಯಾಪತಿ ಅವರಿಗೆ ಶ್ರದ್ಧಾಂಜಲಿ

Chayapathi
Published on

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬುಧವಾರ ಪ್ರಕಾಶಕ ಟಿ.ಎಸ್. ಛಾಯಾಪತಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಛಾಯಾಪತಿ ಅವರು ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಮೂಲಕ 1,500ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಛಾಯಾಪತಿ ನಿಧನದಿಂದ ಪುಸ್ತಕ ಪ್ರಕಾಶನ ಲೋಕಕ್ಕೆ ತುಂಬಲಾಗದ ನಷ್ಟವುಂಟಾಗಿದೆ ಎಂದು ಸಾಹಿತಿ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಹೇಳಿದರು.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಕುವೆಂಪು ಅವರ ಮನೆಗೆ ಛಾಯಾಪತಿಯವರನ್ನು ಆಗಾಗ ಕರೆದೊಯ್ಯುತ್ತಿದ್ದೆ. ನನ್ನ ಹಲವು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕವಯತ್ರಿ ಡಾ.ಲತಾರಾಜಶೇಖರ್, ರಂಗಕರ್ಮಿ ಎಚ್.ಎಸ್. ಗೋವಿಂದೇಗೌಡ, ಸಂವಹನ ಪ್ರಕಾಶನದ ಪ್ರಕಾಶಕ ಡಿ.ಎನ್.ಲೋಕಪ್ಪ, ಭಾರತೀ ಪ್ರಕಾಶನದ ಶ್ರೀನಿವಾಸ್, ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಚಂದ್ರಶೇಖರ್, ಡಾ.ವೈ.ಡಿ.ರಾಜಣ್ಣ, ಟಿ.ಎಸ್.ಛಾಯಾಪತಿ ಪುತ್ರಿ ಪ್ರತಿಭಾ ಮುರಳಿ, ಪುತ್ರ ಪವನ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net