ಮೈತ್ರಿಯಿಂದ ಗ್ಯಾರಂಟಿಗಳ ಅಪಪ್ರಚಾರ

14 vemagal election 1
module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: Night; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ವೇಮಗಲ್: ರಾಜ್ಯ ಸರ್ಕಾರ ಬಡವರಿಗೆ ನೀಡುವ ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲ. ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ್ದ ಭರವಸೆಗಳನ್ನೆಲ್ಲ ಕಾಂಗ್ರೆಸ್​ ಈಡೇರಿಸಿದೆ. ಎಲ್ಲ ಗ್ಯಾರಂಟಿಗಳು ಜನಪ್ರಿಯವಾಗಿವೆ ಎಂದು ಶಾಸಕ ಕೊತ್ತೂರು ಮಂಜುನಾಥ್​ ಹೇಳಿದರು.

ಕೋಲಾರ ತಾಲೂಕು ವೇಮಗಲ್​ನಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಈಗಾಗಲೇ ವೇಮಗಲ್​ ಪಟ್ಟಣ ಪಂಚಾಯಿತಿಯಾಗಿದ್ದು, ಜತೆಗೆ ಯೋಜನಾ ಪ್ರಾಧಿಕಾರವು ರಚನೆಯಾಗಿದೆ. ಕೈಗಾರಿಕೆಗಳೂ ಸ್ಥಾಪನೆಯಾಗಿವೆ. ಕಾಂಗ್ರೆಸ್​ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಕ್ಕೆ ಬಂದರೆ ಈ ಭಾಗದ ಸಮಸ್ಯೆ ನಿವಾರಿಸಲಿದೆ. ಕಾಂಗ್ರೆಸ್​ ಸರ್ಕಾರ ಬಡವರ ಪರ, ಅಭಿವೃದ್ಧಿ ಪರ ಇದೆ ಎಂಬುದನ್ನು ಸಾಬೀತು ಮಾಡಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಜನರಿಗೆ ನೇರವಾಗಿ ತಲುಪುವ ಗ್ಯಾರಂಟಿ ಯೋಜನೆಗಳನ್ನು ಈಗ ಬೇರೆ ರಾಜ್ಯಗಳು ಜಾರಿ ಮಾಡಿವೆ. ನಿರೀಕ್ಷೆಗೂ ಮೀರಿ ಗ್ಯಾರಂಟಿ ಯೋಜನೆಗಳು ಕರ್ನಾಟಕದಲ್ಲಿ ಬೆಳೆದು ಹೊರ ರಾಜ್ಯಗಳಿಗೂ ವಿಸ್ತರಿಸಿವೆ. ಇದು ಗ್ಯಾರಂಟಿಗೆ ಇರುವ ಶಕ್ತಿ ಎಂದು ಎಂಎಲ್ಸಿ ಎಂ.ಎಲ್​. ಅನಿಲ್​ ಕುಮಾರ್​ ಹೇಳಿದರು.

ಮಾಜಿ ಸಭಾಪತಿ ವಿ.ಆರ್​ ಸುದರ್ಶನ್​ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ ಆದಿಯಾಗಿ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳು ಕೈ ಜೋಡಿಸಿದ್ದು, ಕ್ಷೇತ್ರದ ಜನತೆ ಮನಸ್ಸು ಮಾಡಿ ಬದಲಾವಣೆ ತಂದಾಗ ಗ್ರಾಮ, ವಾರ್ಡ್​ಗಳು ಅಭಿವೃದ್ಧಿಯಾಗುತ್ತದೆ. ಅಭ್ಯರ್ಥಿಗಳಾಗಲಿ ಮುಖಂಡರುಗಳಾಗಲಿ ಒಂದೇ ವಾರ್ಡ್​ಗೆ ಸೀಮಿತವಾಗದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರತಿ ವಾರ್ಡ್​ನಲ್ಲಿ ಮತ ಕೇಳುವ ಕೆಲಸ ಮಾಡಬೇಕು. ಎಲ್ಲರಿಗೂ ಎಲ್ಲ ಕಡೆ ಪರಿಚಯಸ್ಥರು ಇರುತ್ತಾರೆ. ಪಕ್ಷಕ್ಕೆ ಮತ ಕೇಳಿ ಅಧಿಕಾರ ಪಡೆಯುವ ಕೆಲಸ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net