ಹಗ್ಗದ ಮೇಲೆ ನಡೆದ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ

Udupi ceo
Published on

ಉಡುಪಿ: ಸ್ಲಾಕ್ ಮಿತ್ರ ಸಂಸ್ಥೆ ಸಹಯೋಗದಲ್ಲಿ ಮಲ್ಪೆಯ ಸೈಂಟ್‌ಮೇರಿಸ್ ದ್ವೀಪದಲ್ಲಿ ಇತ್ತೀಚೆಗೆ ಸ್ಲಾಕ್ಲಿನಿಂಗ್ ಎಂಬ ಸಾಹಸ ಕ್ರೀಡೆ ಪ್ರಯೋಗಾರ್ಥ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನೀರಿನ ಮೇಲೆ ಸಮಾನಂತರವಾಗಿ ಎರಡು ಎತ್ತರದ ಕಂಬಗಳಿಗೆ ಕಟ್ಟಲಾಗಿರುವ ಹಗ್ಗದಂತಹ ಹಿರಿದಾದ ಪಟ್ಟಿಯ ಮೇಲೆ ದೇಹದ ಸಮತೋಲನ ಕಾಪಾಡಿಕೊಂಡು ನಡೆಯುವ ಸಾಹಸ ಕ್ರೀಡೆ ಈ ಸ್ಲಾಕ್ಲಿನಿಂಗ್. ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ನಡೆದ ಈ ಪ್ರದರ್ಶನದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಮಲ್ಪೆ ಅಭಿವೃದ್ದಿ ಸಮಿತಿ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ಸೈಂಟ್‌ಮೇರಿಸ್ ದ್ವೀಪದ ಭೌಗೋಳಿಕ ವಿಸ್ಮಯವನ್ನು ಮತ್ತು ಅಲ್ಲಿನ ಸಾಹಸ ಕ್ರೀಡೆಗಳನ್ನು ನಡೆಸಲು ಇರುವ ಅವಕಾಶಗಳನ್ನು ಪ್ರಚಾರಗೊಳಿಸುವುದಕ್ಕಾಗಿ ಈ ಸ್ಲಾಕ್ಲಿನಿಂಗ್ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಸ್ಲಾಕ್ ಮಿತ್ರ ಸಂಸ್ಥೆಯ ನವೀನ್ ದೇವಾನಾನಿ, ಅದ್ವೈತ್ ಮನೋಹರ್, ಕ್ಷಿತಿಜ್ ಮಿತ್ತಲ್ ಮತ್ತು ವಿನಯಟ್ಟಾರಿಯ ಪ್ರದರ್ಶವನ್ನು ಪ್ರಸ್ತುತ ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net