

ರಾಮ ಕಿಶನ್ ಕೆ.ವಿ. ಬೆಂಗಳೂರು
ಕೆಟ್ಟು ನಿಂತ ಲಿಫ್ಟ್ಗಳು... ಏದುಸಿರು ಬಿಡುತ್ತ ಮೆಟ್ಟಿಲು ಹತ್ತುವ ಹಿರಿಯ ನಾಗರಿಕರು... ಅಲ್ಲಲ್ಲಿ ಬಿದ್ದಿರುವ ಕಸ... ಮೂತ್ರದ ವಾಸನೆ... ಇವು ಬೆಂಗಳೂರಿನ ಪಾದಚಾರಿ ಮೇಲ್ಸೇತುವೆಗಳಲ್ಲಿನ ಸಾಮಾನ್ಯ ನೋಟ. ಲಕ್ಕಸಂದ್ರದ ನಿಮಾನ್ಸ್ ಆಸ್ಪತ್ರೆ ಪಕ್ಕದಲ್ಲಿರುವ ಸ್ಕೈವಾಕ್, ಕೋರಮಂಗಲ ಕೆಸ್ಟ್ ಕಾಲೇಜು ಸಮೀಪದ ಸ್ಕೆ$ವಾಕ್ ಹಾಗೂ ಶಾಂತಿನಗರ ಡಬಲ್ ರಸ್ತೆಯಲ್ಲಿರುವ ಸ್ಕೈವಾಕ್ಗಳ ಕಥೆಯೂ ಇದಕ್ಕೆ ಹೊರತಲ್ಲ.
ನಿಮಾನ್ಸ್ ಆಸ್ಪತ್ರೆ ಹತ್ತಿರದಲ್ಲಿರುವ ಪಾದಚಾರಿ ಮೇಲ್ಸೇತುವೆ ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯದ ಗುಂಡಿಯಂತಾಗಿದೆ. ಅಲ್ಲಿ ಪ್ಲಾಸ್ಟಿಕ್, ಮದ್ಯಪಾನದ ಪ್ಯಾಕೆಟ್, ಕಸ ಬಿದ್ದಿರುತ್ತದೆ. ಮೂತ್ರದ ದುರ್ವಾಸನೆ ಪರಿಣಾಮ ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ. ಸ್ಕೆ$ವಾಕ್ನ ಎರಡೂ ಬದಿಯಲ್ಲಿ ಅಳವಡಿಸಲಾಗಿದೆ. ಆದರೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅದು ಕೆಲಸ ಮಾಡುತ್ತಿಲ್ಲ.
ನಿಮಾನ್ಸ್ ಆಸ್ಪತ್ರೆ, ಕಾಲೇಜು, ಶಾಲೆ ಎಲ್ಲವೂ ಈ ಸ್ಕೈವಾಕ್ ಆಸುಪಾಸಿನಲ್ಲೇ ಇರುವುದರಿಂದ ನಿತ್ಯ ಸಾವಿರಾರು ಮಂದಿ ಬಳಸುತ್ತಿದ್ದಾರೆ. ಆರಂಭದಿಂದ ಇಂದಿನವರೆಗೆ ಸ್ಕೆ$ವಾಕ್ ನಿರ್ವಹಣೆ ಮಾಡಿರುವುದನ್ನು ನಾವ್ಯಾರೂ ಕಂಡಿಲ್ಲ ಎನ್ನುತ್ತಾರೆ ಜನರು. ಸಂಜೆಯಾಗುತ್ತಿದ್ದಂತೆ ಈ ಜಾಗ ನಿರ್ಗತಿಕರ, ಪುಂಡರ ಅಡ್ಡೆಯಾಗುತ್ತಿದೆ. ಕೆಲವರು ರಾತ್ರಿ ಹೊತ್ತು ಇಲ್ಲೇ ಮದ್ಯಪಾನ ಮಾಡಿ, ಪ್ರಜ್ಞಾಹಿನರಾಗಿ ಬಿದ್ದಿರುತ್ತಾರೆ.
ಪರವಾಗಿಲ್ಲ, ಆದ್ರೂ ಸಮಸ್ಯೆ ಇಲ್ಲದಿಲ್ಲ!
ಇದ್ದುದರಲ್ಲಿ ಶಾಂತಿನಗರ ಡಬಲ್ ರೋಡ್ ಹಾಗೂ ಕೆಸ್ಟ್ ಕಾಲೇಜು ಆವರಣದ ಸ್ಕೆ$ವಾಕ್ಗಳು ಪರವಾಗಿಲ್ಲ. ಆದರೆ ಇಲ್ಲೂ ಸಮಸ್ಯೆಗಳಿಲ್ಲದಿಲ್ಲ. ಶಾಂತಿನಗರ ಡಬಲ್ ರೋಡ್ ಸ್ಕೆ$ವಾಕ್ ಉತ್ತಮ ಸ್ಥಿತಿಯಲ್ಲಿದೆ, ಸದ್ಯ ಪೇಂಟಿಂಗ್ ಕೆಲಸ ನಡೆಯುತ್ತಿದೆ. ಎರಡು ಲಿಫ್ಟ್ಗಳಲ್ಲಿ ಒಂದು ಮಾತ್ರ ನಿರ್ವಹಿಸುತ್ತಿದೆ. ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಭದ್ರತಾ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು ಈ ಹೆಚ್ಚು ಬಳಕೆ ಮಾಡುತ್ತಾರೆ. ಮಕ್ಕಳಿಗೆ ಲಿಫ್ಟ್ ಆಟದ ವಸ್ತುವಿನಂತಾಗಿದೆ. ಬೇಕೆಂದೇ ಲಿಫ್ಟ್ನ ಸ್ವಿಚ್ ಒತ್ತುತ್ತಿರುತ್ತಾರೆ ಎಂಬುದು ಸ್ಥಳಿಯರ ದೂರು. ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳು ಹೆಚ್ಚು ಬಳಸುವ ಕೆಸ್ಟ್ ಕಾಲೇಜು ಬಳಿ ಸ್ಕೈವಾಕ್ನಲ್ಲಿ ಸಿಸಿ ಕ್ಯಾಮರಾ ಅಳವಡಿಲಿಲ್ಲ, ಭದ್ರತಾ ಸಿಬ್ಬಂದಿಯೂ ಕಾಣಿಸುವುದಿಲ್ಲ. ಎರಡೂ ಲಿಫ್ಟ್ ಕೆಟ್ಟುಹೋಗಿ ತಿಂಗಳುಗಳೇ ಕಳೆದಿವೆ ಎಂದು ಸ್ಥಳಿಯರು ಮಾಹಿತಿ ನೀಡುತ್ತಾರೆ.
ನಿಮ್ಹಾನ್ಸ್ ಬಳಿಯ ಸ್ಕೆ$ವಾಕ್ನಲ್ಲಿ ಎರಡು ಮೂರು ತಿಂಗಳಿಂದ ಕಸ ತುಂಬಿದ್ದು, ಸಂಬಂಧಿಸಿದವರು ಸ್ವಚ್ಛತೆ ಮಾಡಿಲ್ಲ. ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ… ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ.
ನಿಮ್ಹಾನ್ಸ್ ಬಳಿಯ ಸ್ಕೈವಾಕ್ ಕಸದ ತೊಟ್ಟಿಯಂತಾಗಿದೆ. ಭದ್ರತಾ ಸಿಬ್ಬಂದಿಯೊಬ್ಬರನ್ನು ನೇಮಿಸಿ, ಕಸ ಎಸೆಯುವವರಿಗೆ ದಂಡ ವಿಧಿಸಬೇಕು. ಲ್ಟ್ಿ ಹಾಳಾಗಿರುವುದರಿಂದ ಮೆಟ್ಟಿಲು ಹತ್ತಿಯೇ ಹೋಗಬೇಕಿದೆ. ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ.
ಶಾಂತಿನಗರ ಡಬಲ್ ರೋಡ್ ಸ್ಕೆ$ವಾಕ್ ಅನ್ನು ನಿತ್ಯ ಬಳಸುತ್ತಿದ್ದೇನೆ. ಈ ಹಿಂದೆ ಎರಡೂ ಲಿಫ್ಟ್ ಕೆಟ್ಟು ಹೋಗಿದ್ದವು. ಸದ್ಯ ಒಂದು ರಿಪೇರಿಯಾಗಿದೆ. ಭದ್ರತಾ ಸಿಬ್ಬಂದಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದರೂ, ಸ್ಕೈವಾಕ್ನ ನಿರ್ವಹಣೆ ಮಾತ್ರ ಸರಿಯಾಗಿ ಆಗುತ್ತಿಲ್ಲ.