ಪ್ರತಿಭಾ ಪೋಷಣೆ ಅವಶ್ಯ ಎಸ್.ಕೆ.ಪಿ.ಎ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಶಾಸಕ ವೇದವ್ಯಾಸ ಕಾಮತ್

mng--7 Nov SKPA
Published on

ಮಂಗಳೂರು: ಪ್ರತಿಯೊಬ್ಬರೂ ಪ್ರತಿಭಾವಂತರು. ಅವರಿಗೆ ಅವಕಾಶ ಕಲ್ಪಿಸಿದಾಗ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಸ್.ಕೆ.ಪಿ.ಎ ಮಂಗಳೂರು ವಲಯ ಮಾದರಿಯಾಗಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.


ಎಸ್.ಕೆ.ಪಿ.ಎ ಮಂಗಳೂರು ವಲಯದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಮಾಜಿ ಮೇಯರ್-ಮನಪಾ ಸದಸ್ಯ ದಿವಾಕರ್ ಪಾಂಡೇಶ್ವರ್, ಉದ್ಯಮಿ ಟಿ.ಎ. ಅಶೋಕನ್, ಪ್ರಮುಖರಾದ ಕುಡ್ಪಿ ಅರವಿಂದ್ ಶೆಣೈ, ನಂದನ್ ಮಲ್ಯ, ಸಂದೀಪ್ ಶೆಟ್ಟಿ ಎಕ್ಕೂರು, ಎಸ್.ಕೆ.ಪಿ.ಎ ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ್ ಉಳ್ಳಾಲ, ಕರುಣಾಕರ ಕಾನಂಗಿ, ಪದ್ಮನಾಭ ಸುವರ್ಣ, ಅಜಯ್ ಕುಮಾರ್, ವಿನೇಶ್ ಗಂಜಿಮಠ, ವಿಶಾಲ್ ವಾಮಂಜೂರ್ ಮುಂತಾದವರು ಉಪಸ್ಥಿತರಿದ್ದರು.

13 ವಲಯದ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಎಸ್.ಕೆ.ಪಿ.ಎ ಮಂಗಳೂರು ವಲಯದ ಅಧ್ಯಕ್ಷ ಹರೀಶ್ ಅಡ್ಯಾರ್ ಸ್ವಾಗತಿಸಿದರು. ಬಬಿತ ನಿರೂಪಿಸಿದರು. ಸುನೀಲ್ ಪಂಬೆತ್ತಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net