ಅಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಿ ಆಕ್ರೋಶ

5 skpp 1 ...1
Published on

ಸಕಲೇಶಪುರ: ಭ್ರಷ್ಟಚಾರ ಆರೋಪ ಎದುರಿಸುತ್ತಿರುವ ಹಾಲು ಉತ್ಪಾಧಕರ ಸಹಕಾರ ಸಂಘದ ಕಾರ್ಯಧರ್ಶಿಯೊಂದಿಗೆ ಶಾಮೀಲಾಗಿರುವ ಸಹಕಾರ ಇಲಾಖೆಯ ಸಹಾಯಕ ನೋಂದಾಣಾಧಿಕಾರಿ ಖಾಲಿದ್ ಆಹಮ್ಮದ್ ಭ್ರಷ್ಟಚಾರ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆಂದು ಅರಕಲಗೂಡು ತಾಲೂಕು ಮಾದಾಲಪುರ ಗ್ರಾಮಸ್ಥರು ಗುರುವಾರ ಅಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಆರು ತಿಂಗಳ ಹಿಂದೆ ಗ್ರಾಮದ ಹಾಲು ಉತ್ಪಾಧಕರ ಸಹಕಾರ ಸಂಘದ ಕಾರ್ಯಧರ್ಶಿಯಿಂದ ಸುಮಾರು 30 ಲಕ್ಷರೂಗಳಷ್ಟು ಭ್ರಷ್ಟಚಾರ ನಡೆಸಿರುವ ಬಗ್ಗೆ ದಾಖಲೆ ಸಹಿತ ಅಧಿಕಾರಿಗೆ ದೂರು ನೀಡಿದ್ದರು.  ಇದುವರಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಭ್ರಷ್ಟಚಾರ ಎದುರಿಸುತ್ತಿರುವ ಕಾರ್ಯಧರ್ಶಿ ವಿರುದ್ದ ಸಹಕಾರದ ಸಂಘದ ಆಡಳಿತ ಮಂಡಳಿ ಕಾನೂನು ಪ್ರಕಾರ ಅಮಾನತ್ತು ಮಾಡಲಾಗಿದೆ. ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ, ಕಾರ್ಯದರ್ಶಿ ದೂರು ಆಧಾರಿಸಿ ಯಾವುದೆ ವಿಚಾರಣೆ ನಡೆಸದೆ ಅಮಾನತ್ತಿಗೆ ಸಹಾಯಕ ನೊಂದಾಣಾಧಿಕಾರಿ ಖಲೀದ್ ಆಹಮ್ಮದ್ ಹಾಗೂ ಇಲಾಖೆ ನೌಕರ ಮಂಜುನಾಥ್ ಹಣ ಪಡೆದು ತಡೆಯಾಜ್ಞೆ ನೀಡಿದ್ದಾರೆ ಎಂದು ಅಧಿಕಾರಿಯ ವಿರುದ್ದ ನೇರನೇರವಾಗಿ ಗ್ರಾಮಸ್ಥರು ಆರೋಪಿಸಿದರು.ಪ್ರತಿಭಟನೆ ನೇತ್ರತ್ವವನ್ನು ಗ್ರಾಮದ ಮುಖಂಡ ಮಂಜುನಾಥ್ ಸಂಘದ ನಿರ್ದೇಶಕರು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net