ಹಣ್ಣಾಗುವ ಮುನ್ನವೇ ಕಾಫಿ ಬೀಜ ಕಳವು

28 skpp 1
Published on

ಸಕಲೇಶಪುರ: ತಾಲೂಕಿನ ಇಬ್ಬಡಿ ಗ್ರಾಮದ ಕಾಫಿತೋಟದಲ್ಲಿ ಕಾಫಿ ಬೀಜ ಹಣ್ಣಾಗುವ ಮುನ್ನವೆ ಕಳ್ಳತನ ಮಾಡಲಾಗಿದೆ. ಗ್ರಾಮದ ಲತಾ ಜಗನ್ನಾಥ ಎಂಬುವವರ ಕಾಫಿತೋಟದಲ್ಲಿ ದುಷ್ಮರ್ಮಿಗಳು ಗಿಡದ ಕೊಂಬೆ ಗಳನ್ನು ಕತ್ತರಿಸಿ ಐದು ಚೀಲಕ್ಕೂ ಅಧಿಕ ಕಾಫಿಯನ್ನು ಕತ್ತರಿಸಿದ್ದಾರೆ. ಈ ಸಂದರ್ಭ ಒಂದು ಮೂಟೆಗೂ ಅಧಿಕ ಕಾಫಿ ಬೀಜವನ್ನು ನೆಲಕ್ಕೂ ಚಲ್ಲಿದ್ದಾರೆ. ತೋಟದ ಮಾಲೀಕರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net