ಹುಬ್ಬಳ್ಳಿ: ಇಲ್ಲಿಯ ಸ್ಟೇಷನ್ ರಸ್ತೆಯಲ್ಲಿರುವ ಪಿತ್ತಾಜಿ ಹೆಲ್ತ್ ಕೇರ್ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಚರ್ಮರೋಗ ಸಮಾಲೋಚನೆ ಮತ್ತು ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಸೋಮವಾರದಿಂದ ಶನಿವಾರದವರೆಗೆ ನಿತ್ಯ ಸಂಜೆ 4ಕ್ಕೆ ವೈದ್ಯರು ಲಭ್ಯರಿದ್ದು, ತಪಾಸಣೆ ನಡೆಸುವರು. ಆ. 31ರ ವರೆಗೆ ಶಿಬಿರ ನಡೆಯಲಿದೆ.
ಎಕ್ಜಿಮಾ, ಸೋರಿಯಾಸಿಸ್, ವಿಟಿಲಿಗೋ ಮುಂತಾದ ಚರ್ಮದ ವ್ಯಾದಿ ಪೀಡಿತರಿಗೆ ಸೂಕ್ತ ಪರಿಹಾರ ಒದಗಿಸುವ ಮಹತ್ವದ ಗುರಿ ಹೊಂದಿದೆ.
ಚರ್ಮರೋಗ ತಜ್ಞೆ ಡಾ. ಸ್ಮಿತಾ ಎಸ್.ವಿ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಆಸಕ್ತರು, ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ದಿನೇಶ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.