ಹಸಿರು ತರಕಾರಿಯಿಂದ ಚರ್ಮಕಾಂತಿ

27RAM2
Published on

ರಾಮದುರ್ಗ: ಸಮೀಪದ ತುರನೂರ ಗ್ರಾಮದ ವಿಪ್ರ ವಿದ್ಯಾ ಸಂಸ್ಥೆಯ ಜ್ಞಾನಪ್ರಬೋಧಿನಿ ವಿದ್ಯಾಲಯದ ನೇತೃತ್ವದಲ್ಲಿ ಮಹಿಳೆ ಮತ್ತು ಆರೋಗ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ ಈಚೆಗೆ ಜರುಗಿತು.

ಚರ್ಮರೋಗ ತಜ್ಞೆ ಡಾ.ಮಂಜುಶ್ರೀ ಭಾವಿಕಟ್ಟಿ ಉಪನ್ಯಾಸ ನೀಡಿ, ಪ್ರತಿಯೊಬ್ಬ ಮಹಿಳೆಯರು ಆರೋಗ್ಯಯುತ ಜೀವನ ಹಾಗೂ ಚರ್ಮದ ಕಾಂತಿಗೆ ಹಸಿರು ತರಕಾರಿ ಸೇವಿಸುವಂತೆ ಸಲಹೆ ನೀಡಿದರು. ಚರ್ಮರೋಗದ ಲಣ ಹಾಗೂ ರೋಗದ ಕಾರಣಗಳನ್ನು ಪ್ರೊಜೆಕ್ಟ್​ ಮೂಲಕ ಸಮಗ್ರ ಮಾಹಿತಿ ತಿಳಿಸಿದರು. ವಿಪ್ರ ಸಂಸ್ಥೆಯ ಸದಸ್ಯೆ ಪ್ರೊ.ವಿಜಯಾ ಜೋಶಿ ಅಧ್ಯತೆ ವಹಿಸಿದ್ದರು. ಮಾತೃ ಭಾರತಿ ಅಧ್ಯೆ ಲಕ್ಷಿ$್ಮ ಪಾಟೀಲ, ಸಂಸ್ಥೆಯ ಗೌರವಾಧ್ಯ ವಿ.ಎನ್​. ಗೋಡಖಿಂಡಿ, ಮುಖ್ಯಶಿಕ್ಷಕಿ ಎಸ್​.ವಿ. ನಾಗಗೌಡರ, ಎಸ್​.ಎಸ್​.ಹಿರೇಮಠ, ಕೆ.ಆರ್​.ಶಿರೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net