

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಥಿರ್ಗಳಿಗೆ ಪಠ್ಯ ಕಲಿಕೆಯ ಜತೆಗೆ ಇತರ ಕೌಶಲಗಳೂ ಮುಖ್ಯ. ಕೇವಲ ಪಠ್ಯ ಕಲಿಕೆಯಿಂದ ಗುರಿ ಸಾಧಿಸಲಾಗದು ಎಂದು ಜೆಎಸ್ಎಸ್ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಹೇಳಿದರು.
ವಿದ್ಯಾಗಿರಿ ಜೆಎಸ್ಎಸ್ ಕಾಲೇಜಿನ ಆವರಣದಲ್ಲಿ ಇತ್ತಿಚೆಗೆ ಆರಂಭಿಸಿದ ಶಕ್ತಿ ಕೌಶಲ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಶಕ್ತಿ ಕೌಶಲ ಕೇಂದ್ರದಲ್ಲಿ ಸ್ಪೋಕನ್ ಇಂಗ್ಲಿಷ್, ಸ್ಟಾಕ್ ಮಾರ್ಕೆಟ್ ಕೋರ್ಸಸ್, ಕಂಪ್ಯೂಟರ್ ಟ್ರೇನಿಂಗ್ ವಿವಿಧ ನೌಕರಿಗಳಿಗೆ ಸಂಬಂಧಿಸಿದ ಸಟಿರ್ಫಿಕೆಟ್ ಕೋರ್ಸಗಳ ತರಬೇತಿ ನೀಡಲಾಗುತ್ತದೆ. ಇಂತಹ ವಿಶೇಷ ತರಬೇತಿಗಳನ್ನು ವಿದ್ಯಾಥಿರ್ಗಳು ಪಡೆದರೆ ಉಜ್ವಲ ಭವಿಷ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಡಾ. ಎಸ್.ಎನ್.ಹೊಳಿಹೊಸೂರ, ಶೋಭಾ ಹೊಳಿಹೊಸೂರ, ಡಾ. ಸೂರಜ ಜೈನ, ಮಹಾವೀರ ಉಪಾಧ್ಯೆ, ರೇಖಾ ಹೊಳಿಹೊಸೂರ, ವಿದ್ಯಾಥಿರ್ಗಳು, ಇತರರು ಇದ್ದರು.