

ಚಿತ್ರದುರ್ಗ: ಉತ್ತಮ ಭವಿಷ್ಯಕ್ಕೆ ವಿದ್ಯೆಯೊಂದಿಗೆ ಕೌಶಲವೂ ಸಹಕಾರಿಯಾಗಲಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವ ಕುಮಾರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಬ್ರಹನ್ಮಠ ಸಂಯುಕ್ತ ಕಲಾ ವಿಜ್ಞಾನ ಮತ್ತು ವಾಣಿಜ್ಯಪದವಿ ಪೂರ್ವ ಕಾಲೇಜಲ್ಲಿ ಶನಿವಾರ 2025-26ನೇ ಸಾಲಿನ ವಿ ದ್ಯಾರ್ಥಿ ವೇದಿಕೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಇವತ್ತಿನ ಸಂದರ್ಭದಲ್ಲಿ ಅಂಕಗಳಿಗೆ ಹೆಚ್ಚಿನ ಮಾನ್ಯತೆ ಇಲ್ಲ. ಕೌಶಲದ ಅಗತ್ಯವಿದೆ. ಇದು ಸ್ಪರ್ಧಾತ್ಮಕ ಯುಗದಲ್ಲಿ ನೆರವಿಗೆ ಬರಲಿದೆ ಉತ್ಸಾಹ, ಛಲವಿದ್ದಲ್ಲಿ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪಿಯು ಡಿಡಿ ಕೆ.ತಿಮ್ಮಯ್ಯ ಮಾತನಾಡಿ, ಮುಂದಿನ ಎರಡು ವರ್ಷಗಳನ್ನು ಸರಿಯಾದ ರೀತಿ ಬಳಸಿಕೊಂಡರೆ ಅದು ನಿಮ್ಮ ಬದುಕಿಗೆ ದಾರಿ ದೀಪವಾಗಲಿದೆ ಎಂದರು.
ದ್ವೀತೀಯ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕಲಾ ವಿಭಾಗದ ಕೆ. ರಾಹುಲ್, ಆರ್. ಲೀಲಾವತಿ, ವಿಜ್ಞಾನ ವಿಭಾಗದ ಎಚ್. ವಿಕಾಸ, ವಾಣಿಜ್ಯ ವಿಭಾಗದ ಜಿ.ಎಸ್. ಅಶ್ವಿನಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಎಚ್.ಎಂ ಬಸವರಾಜಪ್ಪ, ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯಪಾಲಕಿ ಡಿ.ಎಸ್.ಅನಿತಾ ಅವರನ್ನು ಗೌರವಿಸಲಾಯಿತು.
ಪ್ರಾಂಶುಪಾಲ ಪಿಎಂಜಿ ರಾಜೇಶ್ ಅಧಕ್ಷತೆ ವಹಿಸಿದ್ದರು. ಟಿ.ಆರ್. ಮಲ್ಲೇಶ್, ಎನ್.ಬಿ. ತಿಪ್ಪೇಸ್ವಾಮಿ ಇದ್ದರು. ಕೋಟೇಶ್ ಪ್ರಾರ್ಥಿಸಿ, ಸುರಕ್ಷಾ ಸ್ವಾಗತಿಸಿದರು, ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೋನಿಕಾ ನೃತ್ಯ ಪ್ರದರ್ಶನ ನೀಡಿದರು.