ಸ್ಕಿಲ್ ಅಪ್ ನಿರ್ವಹಣೆ ವಿಕಸನ ಕಾರ್ಯಾಗಾರ

AJ
‘ಸ್ಕಿಲ್ ಅಪ್’ ನಿರ್ವಹಣೆ ವಿಕಸನ ಕಾರ್ಯಾಗಾರದಲ್ಲಿ ಎ.ಜೆ.ಆಸ್ಪತ್ರೆಯ ವೈದ್ಯಕೀಯ ಆಡಳಿತ ನಿರ್ದೇಶಕಿ ಡಾ.ಅಮಿತಾ ಮಾರ್ಲ, ಎ.ಜೆ.ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಾಶ್ವತ್, ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಪ್ರೊ.ವಿಜಯ ಪಿ. ಮೊದಲಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವತಿಯಿಂದ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ‘ಸ್ಕಿಲ್ ಅಪ್’ ನಿರ್ವಹಣೆ ವಿಕಸನ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ಮಂಗಳೂರಿನ ಸುಶಾಂತ್ ಕನ್ಸಲ್ಟೆನ್ಸಿಯ ಡಾ.ಹ್ಯಾರಿ ಪ್ರಶಾಂತ್ ಮಿರಾಂಡ, ಶ್ರೀನಿವಾಸ ವಿಶ್ವವಿದ್ಯಾಲಯದ ಡೀನ್ ಪ್ರೊ.ವೆಂಕಟೇಶ್ ಶೇಖರ್ ಅಮೀನ್ ಸಂಪನ್ಮೂಲ ವ್ಯಕಿಗಳಾಗಿದ್ದರು. ಆರೋಗ್ಯ ಕಾರ್ಯ ನಿರ್ವಾಹಕರಿಗೆ ಅಗತ್ಯವಾದ ನಿರ್ವಹಣಾ ಕೌಶಲ, ಆರೋಗ್ಯ ಸಂಸ್ಥೆಗಳ ಸುಸ್ಥಿರತೆ, ಸಂಸ್ಥೆಗಳ ಸಂಘಟನಾ ರಚನೆಗಳು ಮತ್ತು ಎದುರಿಸುವ ಸಮಸ್ಯೆಗಳ ಪರಿಹಾರದ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ಎ.ಜೆ.ಆಸ್ಪತ್ರೆಯ ವೈದ್ಯಕೀಯ ಆಡಳಿತ ನಿರ್ದೇಶಕಿ ಡಾ.ಅಮಿತಾ ಮಾರ್ಲ, ಎ.ಜೆ.ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಾಶ್ವತ್, ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಪ್ರೊ.ವಿಜಯ ಪಿ. ಉಪಸ್ಥಿತರಿದ್ದರು. ಚೆನ್ನೈ, ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಹಾಸ್ಪಿಟಲ್ಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಸಿಸ್ಟೆಂಟ್ ಪ್ರೊಫೆಸರ್ ಪ್ರಿಮ್‌ರೋಸ್ ವಿಷ್ಣು ಸ್ವಾಗತಿಸಿದರು. ಎಚ್‌ಆರ್ ಶಶಿಧರ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net