ಜೀವನದ ಪರಿಪೂರ್ಣತೆಗೆ ಕೌಶಲ ಮುಖ್ಯ

16 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಅಧುನಿಕ ಪ್ರಪಂಚದಲ್ಲಿ ಎಲ್ಲ ರಂಗದಲ್ಲಿ ಸ್ಪರ್ಧೆ ಇದೆ. ಅದನ್ನು ಮೆಟ್ಟಿ ನಿಂತು ಭವಿಷ್ಯ ಕಟ್ಟಿಕೊಳ್ಳಬೇಕು. ಪರಿಪೂರ್ಣ ಬದುಕಿನ ಯಶಸ್ವಿಗೆ ಕೌಶಲ ಅಭಿವೃದ್ಧಿ ಹೊಂದಬೇಕು ಎಂದು ಯಶೋಧಾ ವೆಲ್ಫೇರ್​ ಟ್ರಸ್ಟ್​ ಮ್ಯಾನೇಜಿಂಗ್​ ಟ್ರಸ್ಟಿ ದತ್ತಾತ್ರೇಯ ಅಗ್ನಿಹೋತ್ರಿ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್​ ಮೂವಮೆಂಟ್​ನ ಅಂಗ ಸಂಸ್ಥೆ ವಿವೇಕ ಗ್ರಾಮೀಣ ಜೀವನಧಾರ ತರಬೇತಿ ಕೇಂದ್ರ ಹಾಗೂ ಯಶೋಧಾ ವೆಲ್ಫೇರ್​ ಟ್ರಸ್ಟ್​ ವತಿಯಿಂದ ನಗರದ ವಿದ್ಯಾಗಿರಿ ಸತ್ತೂರ ಕಾಲನಿಯ ಯಶೋಧಾ ವೆಲ್ಫೇರ್​ ಕಚೇರಿಯಲ್ಲಿ ಏರ್ಪಡಿಸಿರುವ ಮೊಬೈಲ್​ ರಿಪೇರಿ ಹಾಗೂ ಸವಿರ್ಸ್​ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪ್ರೊ. ವಿ.ಕೆ. ಪರ್ವತಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸ್ವ ಉದ್ಯೋಗ ಕೈಗೊಂಡು ಕುಟುಂಬ ನಿರ್ವಹಣೆ ಮಾಡಿ. 45 ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ದೊರೆತ ಜ್ಞಾನದ ಸಂಪತ್ತನ್ನು ಸರಿಯಾಗಿ ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಎಸ್​ವಿವೈಎಂ ಸಂಸ್ಥೆ ಮೆಸೂರು ವಿಭಾಗದ ಸಾಮಾಜಿಕ ಆಥಿರ್ಕ ಸಬಲೀಕರಣ ಹಾಗೂ ನೀರು ನೈರ್ಮಲ್ಯ ಕಾರ್ಯಕ್ರಮದ ನಿರ್ದೇಶಕ ಡಾ. ಡೆನ್ನಿಸ್​ ಚವ್ಹಾಣ ಅಧ್ಯತೆ ವಹಿಸಿದ್ದರು.
ನಿರ್ವಹಣಾ ಸಮಿತಿ ಸದಸ್ಯ ಡಾ. ಗೋಪಾಲಕೃಷ್ಣ ಕಮಲಾಪುರ, ಎಸ್​ವಿವೈಎಂ ಸಂಸ್ಥೆ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್​. ಜಯಂತ, ಎಸ್​ಡಿಎಂ ಇಂಜಿನಿಯರಿಂಗ್​ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಆರ್​. ಕಪ್ಪಾಲಿ, ಪ್ರಾಧ್ಯಾಪಕ ಪಿ.ಎನ್​. ಏರಿ, ಶಶಿಕಲಾ ಅಗ್ನಿಹೋತ್ರಿ ಇದ್ದರು.
ವಿಜಯ ಸತ್ತೂರ ಸ್ವಾಗತಿಸಿದರು. ಗ್ರಾಮೀಣ ಜೀವನಧಾರಾ ಕೇಂದ್ರದ ವ್ಯವಸ್ಥಾಪಕ ಪಿ.ಡಿ. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾವೇಂದ್ರ ಹೊನ್ನಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net