

ದೇವನಹಳ್ಳಿ : ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಸಧೃಡರಾಗಬೇಕು. ಕ್ರೀಡೆಗಳು ಮನುಷ್ಯನ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಬಿಜೆಪಿ ದೇವನಹಳ್ಳಿ ತಾಲೂಕು ಅಧ್ಯಕ್ಷ ಎನ್.ಎಲ್.ಅಂಬರೀಶ್ ಗೌಡ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದೇವನಹಳ್ಳಿ ಪ್ರೀಮಿಯರ್ ಲೀಗ್ ಸೀಸನ್&2 ಕ್ರಿಕೆಟ್ ಎನ್ಎಲ್ಎ ಕಪ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯೂ ಜೀವನದ ಒಂದು ಭಾಗವಾಗಿದ್ದು, ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತದೆ. ನೀತಿ ನಿಯಮಗಳ ಸಂವಹನೆಯೊಂದಿಗೆ ಶಿಸ್ತಿನ ಅರಿವು ಉಂಟಾಗುತ್ತದೆ. ಕ್ರೀಡೆಯಲ್ಲಿ ಸೋಲು&ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೆಚ್ಚಿಸುತ್ತದೆ. ಹಾಗೆಯೇ ಕ್ರೀಡೆಯಿಂದ ಮನಸ್ಸಿನ ನಾಗಾಲೋಟದ ಕೌಶಲ ವೃದ್ಧಿಯಾಗುತ್ತದೆ. ಕ್ರೀಡೆಯನ್ನು ಜೀವನದ ಒಂದು ಭಾಗವೆಂದು ಪರಿಗಣಿಸುವುದರಿಂದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯ ಎಂದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲೂಕಿನಾದ್ಯಂತ 12 ತಂಡಗಳು ಭಾಗವಹಿಸಿದ್ದು, ಸೋಮುಬಳಗ ರಾಯಸಂದ್ರ, ಗಜಪಡೆ ದೇವನಹಳ್ಳಿ, ರಾಯಲ್ ಟೈಟನ್ಸ್ ಬೂದಿಗೆರೆ, ಯಂಗ್ ಎವಿಲ್ ಸ್ಟಾರ್ಸ್ ದೇವನಹಳ್ಳಿ ಸೇರಿ ಹಲವು ತಂಡಗಳು ಭಾಗವಹಿಸಿದ್ದವು.