

ಕೋಟ: ವಿದ್ಯಾರ್ಥಿಗಳು ಐಎಎಸ್, ಕೆ.ಎಎಸ್ ಹಾಗೂ ಇತರ ಸರ್ಕಾರಿ ಹುದ್ದೆಗಳಿಗೆ ಪೂರ್ವಸಿದ್ಧತೆಯನ್ನು ಪದವಿ ಹಂತದಲ್ಲಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ನರೇನ್ ಅಕಾಡೆಮಿ ಮುಖ್ಯ ನಿರ್ವಹಣಾಧಿಕಾರಿ ಚಂದ್ರಕಾಂತ್ ಹೇಳಿದರು.
ಕೋಟ-ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬ್ರಹ್ಮಾವರದ ನರೇನ್ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮ ಸಮಾರೋಪದಲ್ಲಿ ಮಾತನಾಡಿದರು.
ಕಾಲೇಜು ವತಿಯಿಂದ ಚಂದ್ರಕಾಂತ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಾದ ತ್ರಿಶಾ ಮತ್ತು ಸಹನಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾಂಶುಪಾಲೆ ಪ್ರೊ.ಸುನೀತಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಮೇಶ ಆಚಾರ್, ಸಂಘಟಕ ಡಾ.ಸುಬ್ರಮಣ್ಯ ಎ, ಪ್ರಾಧ್ಯಾಪಕರಾದ ಡಾ.ಶಂಕರ ನಾಯ್ಕ ಬಿ., ಮುರಳಿ ಎಂ.ಜಿ, ರಾಜಣ್ಣ ಎಂ, ಸುಷ್ಮಾ, ಆರತಿ ಹಾಗೂ ತರಬೇತುದಾರ ಅರವಿಂದ ಉಪಸ್ಥಿತರಿದ್ದರು. ಕೀರ್ತನಾ ಸ್ವಾಗತಿಸಿದರು. ಸ್ನೇಹಾ ವಂದಿಸಿದರು. ಶಮಿತಾ ನಿರೂಪಿಸಿದರು ನಿರೂಪಿಸಿದರು.