ಕೌಶಲ ಆಧಾರಿತ ಶಿಕ್ಷಣಕ್ಕೆ ಇರಲಿ ಒತ್ತು

PHOTO-1 (1)11
Published on

ಚಿತ್ರದುರ್ಗ: ಪಠ್ಯಪುಸ್ತಕ,ಅಂಕಗಳಿಗೆ ಸೀಮಿತಗೊಳಿಸದೆ ಜೀವನಕ್ಕೆ ಅಗತ್ಯವಿರುವ ಕೌಶಲ ಆಧಾರಿತ ಶಿಕ್ಷಣವನ್ನೂ ಮಕ್ಕಳಿಗೆ ನೀಡಬೇಕೆಂದು ಡಯಟ್ ಪದನಿಮಿತ್ತ ಸಹ ನಿರ್ದೇಶಕ ಎಚ್.ಮಂಜುನಾಥ್ ವೃತ್ತಿ ಶಿಕ್ಷಕರಿಗೆ ಸಲಹೆ ನೀಡಿದರು.

ಶಿಕ್ಷಣ ಇಲಾಖೆ ಮಹಾರಾಣಿ ಕಾಲೇಜಲ್ಲಿ ಗು ರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ,ವಿಷಯಾಧಾರಿತ ಶಿಕ್ಷ ಕರ ಹಾಗೂ ತಮ್ಮ ವೃತ್ತಿ ಬೇರೆ ಎಂದು ವೃತ್ತಿ ಶಿಕ್ಷಕರು ಭಾವಿಸಬಾರದು. ಕೌಶಲ ಶಿಕ್ಷಣದಿಂದ ಮಕ್ಕಳಲ್ಲಿ ಮಾನಸಿಕ,ದೈಹಿಕ ಸಾಮರ್ಥ್ಯ ಬೆಳೆಯುತ್ತದೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳನ್ನು ಪ್ರೋತ್ಸಾಹಿಸ ಬೇಕೆಂದರು.

ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಮಾತನಾಡಿ,ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಸಜ್ಜುಗೊಳಿಸಬೇಕು.ವೃತ್ತಿ ಶಿಕ್ಷಣದ ಮೂಲಕ ಮಕ್ಕಳಲ್ಲಿ ರುವ ಪ್ರತಿಭೆಗಳನ್ನು ಗುರುತಿಸಿ ಜೀವನಕ್ಕಾಗಿ ಬೇಕಾಗಿರುವ ಕೌಶಲಗಳನ್ನು ಕಲಿಸ ಬೇಕಿದೆ ಎಂದರು. ಡಯಟ್ ಪ್ರಾಂಶುಪಾಲ ಎಸ್‌ಕೆಬಿ ಪ್ರಸಾದ್,ವಿಷಯ ಪರಿವೀಕ್ಷಕ ಬಸವರಾಜ್ ಓಲೇಕಾರ್ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿಪ್ಪೇಸ್ವಾಮಿ,ವೃತ್ತಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್,ರಾಜ್ಯಸಂಘಟನಾ ಕಾರ‌್ಯದರ್ಶಿ ಎಸ್.ಟಿ. ಮಹಾಲಿಂಗಪ್ಪ, ವಿಷಯ ಪರಿವೀಕ್ಷಕರಾದ ಸವಿತಾ, ಗೋವಿಂದಪ್ಪ, ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net