

ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಬಸವ ಅವರ ಕೊಲೆಗೆ ಜೈಲಿನಿಂದಲೇ ಸ್ಕೆಚ್ ಹಾಕಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಆ.19ರಂದು ಎಫ್‌ಐಆರ್ ದಾಖಲಾಗಿದೆ.
ಭದ್ರಾವತಿ ಜಟ್ ಪಟ್ ನಗರದ ಮುಬಾರಕ್ ಅಲಿಯಾಸ್ ಮುಬ್ಬು, ಟಿಪ್ಪು ಆಂಡ್ ಟೀಂನೊಂದಿಗೆ ಸೇರಿಕೊಂಡು ಬಸವನ ವಿರುದ್ಧ ಕೊಲೆ ಸ್ಕೆಚ್ ಹಾಕಲಾಗಿದೆ. ಜೈಲಿನಿಂದಲೇ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ಶಾಸಕ ಆಪ್ತರೊಬ್ಬರು ನೀಡಿರುವ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.
ವ್ಯಕ್ತಿಯೊಬ್ಬ ಭದ್ರಾವತಿಯ ರಂಗಪ್ಪ ವೃತ್ತದಲ್ಲಿ ಶಾಸಕರ ಆಪ್ತನ ಬಳಿ ಬಂದು ಬಸಣ್ಣ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಮನೆಯಲ್ಲಿರಬಹುದೆಂದು ಹೇಳಿದಾಗ ಆ ಬಳಿಕ ಆತ ಮುಬಾರಕ್ ಜೈಲಿನಿಂದ ಎರಡು ಪ್ರತ್ಯೇಕ ಫೋನ್ ನಂಬರ್‌ನಿಂದ ಕರೆ ಮಾಡಿ ಬಸವರನ್ನು ಮುಗಿಸುವ ಡೀಲ್ ನಡೆದಿರುವ ಬಗ್ಗೆ ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ಶಾಸಕರ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಚ್ಚಿ ಮುಬಾರಕ್ ಜೈಲಿನಲ್ಲಿದ್ದುಕೊಂಡ ಬಸವನ ಹತ್ಯೆಗೆ ಸ್ಕೆಚ್ ಹಾಕಿ ಸೀಗೆಬಾಗಿ ನಿವಾಸಿ ಟಿಪ್ಪುಗೆ ಡೀಲ್ ಕೊಟ್ಟಿದ್ದಾನೆ. ಗಾಂಧಿ ಸರ್ಕಲ್‌ನಲ್ಲಿ ಬಸವನನ್ನು ಹೊಡೆದು ಹಾಕಿ ಎಂದು ಟಿಪ್ಪು ಆಂಡ್ ಟೀಂಗೆ ಹೇಳಿರುವುದಾಗಿ ದೂರು ನೀಡಲಾಗಿದೆ.
ಡಿಚ್ಚಿ ಮುಬಾರಕ್ ಡೀಲ್ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬಾರಕ್ ಗೆ ತೋರಿಸಿರುವ ಬಗ್ಗೆ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.