ಸ್ಕೇಟಿಂಗ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

IMG-20251014-WA0015.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದ ಶ್ರೀ ವೀರಭದ್ರೇಶ್ವರ ರೋಲ್ಲರ್ ಸ್ಕೇಟಿಂಗ್ ಹಾಗೂ ಸ್ಪೋರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ 11ನೇ ಚಾಂಪಿಯನ್ ಶಿಪ್ ಹಾಗೂ ಆಯ್ಕೆ ಟ್ರಯಲ್ಸ ನಲ್ಲಿ 16 ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಧಾರವಾಡ ಜಿಲ್ಲಾ ರೋಲ್ಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಕಾಡಪ್ಪನವರ, ಪ್ರಧಾನ ಕಾರ್ಯದರ್ಶಿ ಈರಣ್ಣ ಕಾಡಪ್ಪನವರ ನೇತೃತ್ವದಲ್ಲಿ ನಗರದ ಗಾಜಿನಮನೆ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಂದ್ಯಾವಳಿಯಲ್ಲಿ ಅಕಾಡೆಮಿಯ ಏಳು ವಿದ್ಯಾರ್ಥಿಗಳು 7 ಚಿನ್ನ, 9 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ಮಲ್ಲಿಕಾರ್ಜುನಯ್ಯ ಹೊಸಮಠ 3 ಚಿನ್ನ, ಜೆ. ಪ್ರಶಸ್ತಾ 2 ಚಿನ್ನ, ಪ್ರಥಮ ಬುರ್ಲಿ ಒಂದು ಚಿನ್ನ ಹಾಗೂ ಎರಡು ಬೆಳ್ಳಿ, ನಮನ ಕ್ಯಾತನವರ ಒಂದು ಚಿನ್ನ ಹಾಗೂ ಒಂದು ಬೆಳ್ಳಿ, ಅಲಿಹಸನ್ ಮುಲ್ಲಾ 2 ಬೆಳ್ಳಿ, ಅರ್ಜುನ ರುದ್ರಗೌಡ 3 ಬೆಳ್ಳಿ, ಶಿವನಾಥ ಹಿರೇಮಠ 1 ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಅಕಾಡೆಮಿ ತರಬೇತಿದಾರ ವಿರುಪಾಕ್ಷ ಕಮ್ಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net