ಸ್ಕೇಟಿಂಗ್ ರಿಂಕ್ ಆಧುನೀಕರಣಕ್ಕೆ ಶಾಸಕ ಕಾಮತ್ ಚಾಲನೆ

mng-1sep-skating
Published on



ಮಂಗಳೂರು : ನಗರದ ಮಂಗಳಾ ಕ್ರೀಡಾಂಗಣದ ಬಳಿಯಿರುವ ಸ್ಕೇಟಿಂಗ್ ಅಂಗಣವನ್ನು ದುರಸ್ತಿಗೊಳಿಸಿ ಆಧುನೀಕರಣಗೊಳಿಸುವ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಚಾಲನೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಅನುದಾನದಿಂದ ಸ್ಕೇಟಿಂಗ್ ಅಂಗಣವನ್ನು ದುರಸ್ತಿಗೊಳಿಸಲಾಗುತ್ತಿದೆ. ಮಳೆಗಾಲದಲ್ಲೂ ಅಂಗಣದೊಳಗೆ ಸ್ಕೇಟಿಂಗ್ ಅಭ್ಯಾಸಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಅಂಗಣದೊಳಗೆ ನೀರು ನಿಲ್ಲದಂತೆ ಮಾಡಲಾಗುವುದು. ಮಂಗಳೂರಿನಲ್ಲಿ ಹಲವಾರು ಸ್ಕೇಟಿಂಗ್ ಕ್ರೀಡಾಪಟುಗಳಿದ್ದು, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅಗತ್ಯವಿರುವ ಅಭ್ಯಾಸ ಸೌಕರ್ಯಗಳನ್ನು ಇಲ್ಲಿ ಒದಗಿಸಲಾಗುವುದು ಎಂದು ಶಾಸಕ ಕಾಮತ್ ಈ ಸಂದರ್ಭ ತಿಳಿಸಿದರು.
ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕಿಲಾ ಕಾವ, ಗುರು ಚರಣ್, ಪ್ರಶಾಂತ್ ಮಠದಕಣಿ, ರಾಮಚಂದ್ರ ಭಂಡಾರಿ, ಪವನ್ ಶೆಣೈ, ಪೃಥ್ವಿರಾಜ್, ಹರೀಶ್ ಬೋಳೂರು, ಸ್ವರ್ಣ ಕೃಷ್ಣ, ಮೋಹನ್ ಆಚಾರ್ಯ, ವಸಂತ್ ಜೆ ಪೂಜಾರಿ, ಮಹೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net