ಸ್ಕೇಟಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

08Jaggu7
ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಬೆಳಗಾವಿ ಬ್ಲೂಮಿಂಗ್ ಬಡ್ಸ್ ಶಾಲೆ ವಿದ್ಯಾರ್ಥಿಗಳನ್ನು ಪ್ರಾಚಾರ್ಯೆ ಸುಷ್ಮಾ ಚರಂತಿಮಠ ಸನ್ಮಾನಿಸಿದರು. ಶಿವರಾಜ್ ಮಂಗಳೂರು, ನೈನಾ ಶಿವರಾಜ್ ಇದ್ದರು.
Published on

ಬೆಳಗಾವಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡದಲ್ಲಿ ಜೂ.27ರಿಂದ ಜೂ.30ರ ವರೆಗೆ ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ 2ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಬ್ಲೂಮಿಂಗ್ ಬಡ್ಸ್ ಶಾಲೆಯ ಸ್ಕೇಟರ್‌ಗಳು ಅಮೋಘ ಸಾಧನೆ ಮಾಡಿದ್ದಾರೆ. 15 ರಾಜ್ಯಗಳಿಂದ ಭಾಗವಹಿಸಿದ್ದ 200 ಮಕ್ಕಳಲ್ಲಿ, ಬ್ಲೂಮಿಂಗ್ ಬಡ್ಸ್ ವಿದ್ಯಾರ್ಥಿ ಜಯಧ್ಯಾನ್ ಎಸ್. ರಾಜ್ 9ನೇ ವಯಸ್ಸಿನ (14-17) ಇನ್‌ಲೈನ್ ಪ್ರೀಸ್ಟೈಲ್ ಸ್ಪೀಡ್ ಸ್ಲಾಲೋಮ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 4ನೇ ತರಗತಿಯ ಹಿರೇನ್ ಎಸ್.ರಾಜ್ ಕ್ಲಾಸಿಕ್ ಸ್ಲಾಲೋಮ್ನಲ್ಲಿ ಚಿನ್ನದ ಪದಕ ಹಾಗೂ ಸ್ಪೀಡ್ ಸ್ಲಾಲಮ್ (9-11) ವಯೋಮಿತಿಯಲ್ಲಿ ಬೆಳ್ಳಿ ಪದಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರಾದ ಶಿವರಾಜ್ ಮಂಗಳೂರು ಮತ್ತು ನೈನಾ ಶಿವರಾಜ್ ಅವರನ್ನು ಶಾಲೆಯ ವತಿಯಿಂದ ಪ್ರಾಂಶುಪಾಲೆ ಸುಷ್ಮಾ ಚರಂತಿಮಠ ಸನ್ಮಾನಿಸಿದರು. ವಿದ್ಯಾರ್ಥಿಗಳು ಆಡಳಿತ ಮಂಡಳಿ, ಪ್ರಾಚಾರ್ಯರು, ಕ್ರೀಡಾ ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಮಾರ್ಗದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net