

ಹುಬ್ಬಳ್ಳಿ: ಇಲ್ಲಿಯ ನವನಗರದ ಶ್ರೀ ವೀರಭದ್ರೇಶ್ವರ ರೋಲರ್ ಸ್ಕೇಟಿಂಗ್ ಮತ್ತು ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ವಿವಿಧ ಶಾಲೆ ಮಕ್ಕಳಿಗಾಗಿ ಎಪಿಎಂಸಿ ಬಳಿ ಸ್ಕೇಟಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿವಿಧ ವಯೋಮಾನದ 40ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧನೆ ತೋರಿದರು.
ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ (ಡಿಡಿಆರ್ಎಸ್ಎ) ಕಾರ್ಯದರ್ಶಿ ಮಲ್ಲಿಕಾರ್ಜುನ ಕಾಡಪ್ಪನವರ, ತರಬೇತಿದಾರ ವಿರುಪಾಕ್ಷ ಕಮ್ಮಾರ ನೇತೃತ್ವ ವಹಿಸಿದ್ದರು.
ತಬರೇಜ್ ಆಲಂ, ಮಹೇಶ ಕಮ್ಮಾರ, ವಿರುಪಾಕ್ಷ ಬಾವಿಕಟ್ಟಿ, ಮಂಜುನಾಥ ಬಂಡಿ, ಮಂಜುನಾಥ ಬುಲಿರ್, ಚನ್ನಬಸು ಚಿಣಗಿ, ಇತರರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಬಹುಮಾನ ವಿತರಣೆ: ನವನಗರದ ಈಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಬಹುಮಾನ ವಿತರಣೆ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದ ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಯಾವುದೇ ಕ್ರೀಡೆಯಲ್ಲಿ ಮಕ್ಕಳು ಸಾಧನೆ ಮಾಡಬೇಕಾದರೆ ಸತತ ಪ್ರಯತ್ನ ಅಗತ್ಯ. ಇದಕ್ಕಾಗಿ ಪಾಲಕರು ಸಹ ಬಹಳಷ್ಟು ಪರಿಶ್ರಮ ಪಡಬೇಕಾಗುತ್ತದೆ ಎಂದರು.
ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ, ವಿಶ್ವ ಕನ್ನಡ ಬಳಗದ ಸದಾಶಿವ ಚೌಶೆಟ್ಟಿ ಅವರು ಮಾತನಾಡಿದರು.
ಅಕಾಡೆಮಿ ಚೇರ್ಮನ್ ಸುಮಂಗಲಾ ಎಸ್. ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಶಂಕ್ರಪ್ಪ ಕಲಕೇರಿ, ಮರವಿನ್ ಫಾದರ್, ಭಾರತಿ ಇತರರು ಪಾಲ್ಗೊಂಡಿದ್ದರು.