ಸ್ಕೇಟಿಂಗ್ ಸಾಧಕಿಗೆ ಸನ್ಮಾನ

IMG-20240926-WA0018.jpg
Published on

ಹುಬ್ಬಳ್ಳಿ: ವಿಶ್ವ ಸ್ಕೇಟ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತೆ ತ್ರಿಷಾ ಪ್ರವಿಣ ಜಡಾಲಾ ಅವರನ್ನು ಸ್ವರ್ಣ ಗ್ರುಪ್ ಆಫ್ ಕಂಪನಿ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಸನ್ಮಾನಿಸಿದರು. ಗುರುವಾರ ನಗರಕ್ಕೆ ಆಗಮಿಸಿದ ಅಭಿನಂದಿಸಲಾಯಿತು.

ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಲು ತ್ರಿಷಾ ಅವರಿಗೆ ಅಗತ್ಯ ಆರ್ಥಿಕ ನೆರವು ನೀಡಲಾಗಿತ್ತು. ಬಿ.ಕಾಂ. ಓದುತ್ತಿರುವ ತ್ರಿಷಾ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದರು. 2023ರ ಏಷಿಯನ್ ಗೇಮ್ಸ್ ಸೇರಿ 2017ರಿಂದ ಇಲ್ಲಿಯವರೆಗೆ ವಿವಿಧ ಪದಕಗಳನ್ನು ಇವರು ಪಡೆದಿದ್ದಾರೆ.

ತ್ರಿಷಾ ಪ್ರತಿಭೆಯನ್ನು ಮನಗಂಡು ಡಾ. ಪ್ರಸಾದ ಅವರು ನೆರವು ನೀಡಿದ್ದರು. ವಿಶ್ವ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಇದೀಗ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ ಪ್ರತಿಭಾವಂತರಿಗೆ ಅನುಕೂಲ ಒದಗಿಸಬೇಕು ಎಂದು ದಾನಿಗಳಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net