ನಾಗರಹಾವಿಗೆ ಅಂಗಾಂಗ ಶಸ್ತ್ರಚಿಕಿತ್ಸೆ ಯಶಸ್ವಿ!

IMG-20240122-WA0035.jpg
Published on


-ಸರ್ಕಾರಿ ಪಶುವೈದ್ಯರ ಸಾಧನೆಗೆ ಪ್ರಾಣಿಪ್ರಿಯರಲ್ಲಿ ಸಂತಸ
ಬೆಳಗಾವಿ: ತಾಲೂಕಿನ ಕೆದ್ನೂರು ಗ್ರಾಮದ ಹೊರ ವಲಯದ ಕೃಷಿ ಜಮೀನಿನಲ್ಲಿ ಗಾಯಗೊಂಡು ನರಳುತ್ತಿದ್ದ ನಾಗರಹಾವೊಂದನ್ನು ರಕ್ಷಿಸಿ, ವೈದ್ಯರು ಅದರ ಕತ್ತಿನ ಕೆಳಗೆ ಅಂಗಾಂಗ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿ  ಜೆಸಿಬಿ ಕೆಲಸ ಮಾಡುತ್ತಿದ್ದಾಗ ನಾಗರಹಾವಿಗೆ ಜೆಸಿಬಿ ಬಕೆಟ್‌ನ ಹಲ್ಲು ಹಾವಿನ ಕತ್ತಿನ ಕೆಳಗೆ ಮತ್ತು ಇತರ ಕರೆ ಚುಚ್ಚಿದ್ದರಿಂದ ತೀವ್ರ ಪೆಟ್ಟಾಗಿ ನಾಗರಹಾವು ನರಳುತ್ತಿತ್ತು. ಈ ಕೂಡಲೇ ಜಮೀನಿನ ಮಾಲೀಕ ಉರಗ ತಜ್ಞ ಕೇತನ್ ಜಯವಂತ ರಾಜೈ ಅವರಿಗೆ ಕರೆ ಮಾಡಿ ಹಾವವನ್ನು ರಕ್ಷಿಸುವಂತೆ ಹೇಳಿದ್ದರು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಕೇತನ್ ಕೂಡಲೇ ಬೆಳಗಾವಿ ಮಹಾಂತೇಶ ನಗರದಲ್ಲಿರುವ  ಸರ್ಕಾರಿ  ಮಲ್ಟಿ ಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆಗೆ ಸರುಕ್ಷಿತ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಬಂದಿದ್ದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ.ಸಣ್ಣಕ್ಕಿ,ಡಾ.ಮಹಾದೇವ  ಮುಲ್ಲಾಟಿ ಅವರನ್ನು ಒಳಗೊಂಡ ವೈದ್ಯರ ತಂಡ ತಕ್ಷಣವೇ ನಾಗರಹಾವಿಗೆ ಅರಿವಳಿಕೆ ನೀಡಿ ಕುತ್ತಿಗೆಯ ಕೆಳಭಾಗದಲ್ಲಿರುನ ಒಳಗಾಂಗಗಳ ಹೊರತೆಗೆಯುವಿಕೆ, ಸೀಳುವಿಕೆ ಮತ್ತು ಮರು ಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದರು. ಈ ವೇಳೆ ಹಾವು ಉಸಿರಾಡಲು  ಆಮ್ಲಜನಕ ಪೂರೈಕೆ ಮಾಡಿದರು. ಹಾವಿಗೆ ಐದು ದಿನಗಳ ಚಿಕಿತ್ಸೆ ನೀಡುತ್ತಿದ್ದು, ಗಾಯಗಳು ವಾಸಿಯಾಗುವವರೆಗೆ  ಉರಗ ತಜ್ಞ ಕೇತನ್ ಆರೈಕೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net