ಎಸ್‌ಕೆಜಿಐ ಪಾಲ್ಕೆ ಪ್ರಶಸ್ತಿ ಪ್ರದಾನ

sk
ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆಯಲ್ಲಿ ಪಂಚ ಕಸುಬುಗಳಲ್ಲಿ ಅದ್ವಿತೀಯ ಸಾಧನೆಗೈದ ಐವರು ಶಿಲ್ಪಿಗಳಿಗೆ 2022-23ನೇ ಸಾಲಿನ ಎಸ್.ಕೆ.ಜಿ.ಐ.ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಮಂಗಳೂರು : ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆಯಲ್ಲಿ ಪಂಚ ಕಸುಬುಗಳಲ್ಲಿ ಅದ್ವಿತೀಯ ಸಾಧನೆಗೈದ ಐವರು ಶಿಲ್ಪಿಗಳಿಗೆ 2022-23ನೇ ಸಾಲಿನ ಎಸ್.ಕೆ.ಜಿ.ಐ.ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ವರ್ಣಶಿಲ್ಪ- ಮೋಹನ ಆಚಾರ್ಯ ಮಂಗಳೂರು, ಕಾಷ್ಠಶಿಲ್ಪ- ಪ್ರಭಾಕರ ಆಚಾರ್ಯ ಗೋಪಾಡಿ, ಎರಕಶಿಲ್ಪ- ಶ್ರೀಧರ ಆಚಾರ್ಯ ಮೂಡುಶೆಡ್ಡೆ, ಅಯಸ್ ಶಿಲ್ಪ- ಎಂ.ಆನಂದ ಆಚಾರ್ಯ ಮಾಪಲಾಡಿ, ಶಿಲಾಶಿಲ್ಪ- ಪ್ರಕಾಶ್ ಆಚಾರ್ಯ ಕುಕ್ಕುಂದೂರು ಪ್ರಶಸ್ತಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net