ಎಸ್​ಜೆಎಸ್​ಎಸ್​ ಲಿಟಲ್​ ಚಾಂಪ್​ ಗುರುಕುಲಂ ವಾಷಿರ್ಕೋತ್ಸವ

oplus_1026
oplus_1026
Published on

ವಿಜಯವಾಣಿ ಸುದ್ದಿಜಾಲ ಗದಗ

ತಂದೆಯು ಮಕ್ಕಳಿಗೆ ಎಲ್ಲ ರೀತಿ ಸಹಕಾರ ನೀಡಿದರೆ, ತಾಯಿಯು ಮಕ್ಕಳ ಭೌದ್ಧಿಕ ಬೆಳವಣಿಗೆಯ ಮೂಲ ಆಗಿರುತ್ತಾರೆ. ಶಿಕ್ಷಕರು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಲು ಮಾರ್ಗ ತೋರುತ್ತಾರೆ. ತಂದೆ, ತಾಯಿ ಮತ್ತು ಶಿಕ್ಷಕರು ಮಗುವಿನ ಜೀವನದಲ್ಲಿ ಅತ್ಯಮೂಲ್ಯ ಪಾತ್ರದಾರಿಗಳು ಆಗಿದ್ದಾರೆ ಎಂದು ಡಿಡಿಪಿಐ ಆರ್​.ಎಸ್​. ಬುರಡಿ ಹೇಳಿದರು

ನಗರದ ಬೀಮಸೇನ ಜ್ಯೋಶಿ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಸ್​ಜೆಎಸ್​ಎಸ್​ ಲಿಟಲ್​ ಚಾಂಪ್​ ವಾಷಿರ್ಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು, ಈ ದೇಶ ರಾಜಕಾರಣಿ, ಸೈನಿಕರ ಕೈಯಲ್ಲಿಲ್ಲ. ಬದಲಾಗಿ, ದೇಶದ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಕೈಯಲ್ಲಿದೆ. ಉಪಕಾರ ಸ್ಮರಣೆ ಎಲ್ಲರಲ್ಲೂ ಇರಬೇಕು. ಶಿಕ್ಷಕರು ಮಕ್ಕಳಲ್ಲಿ ತಮ್ಮ ಅನುಭವದ ಧಾರೆಯನ್ನು ಎರೆದರೆ ಭವಿಷ್ಯದಲ್ಲಿ ಶಿಷ್ಯರಿಂದ ವಿವಿಧ ರೀತಿಯಲ್ಲಿ ಉಪಕಾರ ಸ್ಮರಣೆ ಉಪಕಾರ ಸ್ಮರಣೆಯ ಗೌರವ ಮೂಲಕ ಶಿಕ್ಷಕರಿಗೆ ಸಿಗುತ್ತದೆ. ನಗರದ ಲಿಟಲ್​ ಚಾಂಪ ಶಾಲೆಯು ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಾಗಲು ವಿಶೇಷ ತರಬೇತಿಗಳನ್ನು ನೀಡುತ್ತಿದೆ. ಈ ಶಾಲೆ ಮಕ್ಕಳಿಗೆ ಉತ್ತಮ ಕಲಿಕೆ ವಾತಾವರಣ ಸೃಷ್ಟಿ ಮಾಡುತ್ತಿದೆ. ಜ್ಞಾನ ಕಟ್ಟುವ ಕೆಲಸವನ್ನು ಇಲ್ಲಿನ ಶಿಕ್ಷಕ ವೃಂದ ಮಾಡುತ್ತಿದೆ ಎಂದರು.

ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿ ಬಸವರಾಜ ಬಳ್ಳಾರಿ ಮಾತನಾಡಿ, ಮಕ್ಕಳು ಚಿಕ್ಕಂದಿನಿಂದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ಧಿಶಕ್ತಿ, ಧೈರ್ಯ ಹೆಚ್ಚುವುದರ ಜೊತೆಗೆ ಭಯ ಹೋಗಲಾಡಿಸಬಹುದು. ವರ್ಷದ ಶಾಲಾ ವಾಷಿರ್ಕೋತ್ಸವದ ಮನರಂಜನೆಗಳಲ್ಲಿ ಭಾಗವಹಿಸುವುದರಿಂದ ಮಗುವಿಗೆ ಸಾಮಾಜಿಕರಣ ಹಾಗೂ ಸಾಂಸತಿಕ ಶಿಸ್ತನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ, ಇದಕ್ಕೆ ಪಾಲಕರ ಸಹಮತವು ಇರಬೇಕು. ಸಂಸತದ ಕೆಲವು ಶ್ಲೋಕಗಳನ್ನು ಹೇಳುವುದರ ಜೊತೆಗೆ ಅವುಗಳ ಅರ್ಥ ಸಹಿತ ಮಕ್ಕಳಿಗೆ ತಿಳಿಸಿ, ವಿದ್ಯಾಥಿರ್ಗಳು ಶಾಲಾ ಜೀವನದಲ್ಲಿ ಶ್ಲೋಕಗಳನ್ನು ಅಭ್ಯಾಸ ಮಾಡಿಸುವ ಪರಂಪರೆಯನ್ನು ಎಸ್​ಜೆಎಸ್​ಎಸ್​ ಲಿಟಲ್​ ಚಾಂಪ ಶಾಲೆ ಮಾಡುತ್ತಿದೆ. ಶ್ಲೋಕ ಅಭ್ಯಾಸ ಮಾಡುವುದರಿಂದ ಮಕ್ಕಳ ನೆನಪಿನ ಶಕ್ತಿ ವೃದ್ಧಿಸುತ್ತದೆ. ಭಾರತದ ಸಂಪ್ರದಾಯ ಪದ್ಧತಿಗಳನ್ನು ಪೋಷಕರು ಮಕ್ಕಳಿಗೆ ಕಲಿಸಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿಗಳಾದ ಆರ್​.ಎಸ್​. ಬುರಡಿ, ವಿ.ವಿ. ನಡುವಿನಮನಿ, ಸಿಆರ್​ಪಿ ಶೈಲಾಜಾ ಮತ್ತಿ, ಗ್ರಾಪಂ ಅಧ್ಯಕ್ಷ ಅಲ್ತಾಫ ಕಾಗದಗಜ ಇತರರನ್ನು ಸನ್ಮಾನಿಸಲಾಯಿತು. ವಿವಿಧ ಸ್ಮರ್ಧೆಯಲ್ಲಿ ವಿಜೇತ ಮಕ್ಕಳನ್ನು ಸನ್ಮಾನಿಸಲಾಯಿತು. ರಾಮಂಚಂದ್ರ ವಿ.ಬಿ. ಅಧ್ಯಕ್ಷತೆ ವಹಿಸಿದ್ದರು. ಮಣಕವಾಡ ಶ್ರೀಗಳು, ಪ್ರೇಮನಾಥ ಕೆ, ಪುಷ್ಪಾವತಿ ಬಿಸ್ನಳ್ಳಿ, ಶೋಭಾವತಿ ಬಿಸ್ನಳ್ಳಿ, ರಾಜೇಶ್ವರಿ ಭದ್ರಗೌಡರ, ಅಂಜಲಿ ಮೇರವಾಡೆ ಇತರರು ಇದ್ದರು.

ಕೋಟ್​:

ಮನೆಯಲ್ಲಿ ಪೋಷಕರಂತೆ ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಜವಾಬ್ದಾರಿ ಹೊತ್ತಿರುತ್ತಾರೆ. ನಮ್ಮ ನಡವಳಿಕೆಯಂತೆ ಮಕ್ಕಳು ತಮ್ಮ ನಡವಳಿಕೆ ಅಳವಡಿಸಿಕೊಳ್ಳುತ್ತಾರೆ. ಮೊಬೈಲ್​ಗಿಂತ ಕೆಟ್ಟ ಹವ್ಯಾಸ ಬೇರೊಂದಿಲ್ಲ. ಹಾಗಾಗಿ ಮಕ್ಕಳ ಮುಂದೆ ಪೋಷಕರು ಮೊಬೈಲ್​ ಬಳಸಬಾರದು.

- ರಾಮಚಂದ್ರ ವಿ.ಬಿ. ಎಸ್​ಜೆಎಸ್​ಎಸ್​  ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net