ಕ್ರೀಡಾಕೂಟದಲ್ಲಿ ಎಸ್‌ಜೆಆರ್ ಕಾಲೇಜಿಗೆ ವಿವಿಧ ಪ್ರಶಸ್ತಿ

bhr 3 (6)
Published on

ಬಾಳೆಹೊನ್ನೂರು: ಪದವಿ ಪೂರ್ವ ಕಾಲೇಜುಗಳ ಎನ್.ಆರ್.ಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಳೆಹೊನ್ನೂರು ಎಸ್‌ಜೆಆರ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ್ದಾರೆ ಎಂದು ಪ್ರಾಚಾರ್ಯ ಕೆ.ಆರ್.ಭೂದೇಶ್ ತಿಳಿಸಿದ್ದಾರೆ.

ಸಾಲೀಮ್- ತಟ್ಟೆ ಎಸೆತ. ಗುಂಡು ಎಸೆತ ಮತ್ತು ಹ್ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ ಸ್ಥಾನ ಗಳಿಸಿರುತ್ತಾರೆ. ಆಕಾಶ್- ತ್ರಿವಿಧ ಜಿಗಿತ (ಪ್ರಥಮ), ಬಾಲಕರ ಕಬ್ಬಡ್ಡಿ- ಗಗನ್ ಮತ್ತು ತಂಡ (ಪ್ರಥಮ), ಬಾಲ್ ಬ್ಯಾಡ್ಮಿಂಟನ್ ಸೂರ್ಯ ಮತ್ತು ತಂಡ (ಪ್ರಥಮ), ಟೆನಿಸ್ ವಾಲಿಬಾಲ್- ಸಜನ್ ಮತ್ತು ತಂಡ (ಪ್ರಥಮ), ಬಾಲಕಿಯರ ಟೆನಿಸ್ ವಾಲಿಬಾಲ್ - ರೋಶಿನಿ ಮತ್ತು ತಂಡ (ಪ್ರಥಮ), ಮಾನ್ವಿತಾ 100 ಮಿ ಓಟ (ಪ್ರಥಮ), ಐಶ್ವರ್ಯ ತ್ರಿವಿಧ ಜಿಗಿತ (ದ್ವಿತೀಯ), ಸೂರ್ತಿ ಹ್ಯಾಮರ್ ಥ್ರೋ (ಪ್ರಥಮ), ರೋಶಿನಿ - ಗುಂಡು ಎಸೆತ, ಹ್ಯಾಮರ್ ಥ್ರೋ (ದ್ವಿತೀಯ), ಬಾಲ್ ಬ್ಯಾಡ್ಮಿಂಟನ್ ಆಶ್ರೀಯ ಮತ್ತು ತಂಡ (ದ್ವಿತೀಯ), 4*100 ರಿಲೇ ಸುಜಾತ ಮತ್ತು ತಂಡ (ತೃತೀಯ), 4*400 ರಿಲೇ ಸಂಪಿಕಾ ಮತ್ತು ತಂಡ (ತೃತೀಯ), 4*400 ರಿಲೇ ಭೂಷಣ್ ಮತ್ತು ತಂಡ (ತೃತೀಯ) ಸ್ಥಾನ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net