ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಲಿ

sjmvs
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಂಡು ಸ್ಪರ್ಧ್ಮಾತ್ಮಕ ಪರೀಕ್ಷೆಗಳಲ್ಲಿ ಜಯಶಾಲಿಯಾಗಬೇಕೆಂದು ಎಸ್​ಜೆಎಂವಿ ಸಂಘದ ಗೌರವಾಧ್ಯಕ್ಷ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಅರವಿಂದ ಕುಬಸದ ಹೇಳಿದರು.

ಪದವಿಯಲ್ಲಿ ಕನ್ನಡ ವಿಷಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಭಾನುವಾರದಂದು ಇಲ್ಲಿಯ ಮೂಜಗಂ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕನ್ನಡ ಭಾಷಾಭಿಮಾನವನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಓದುವ ಸಾಮಗ್ರಿಯನ್ನು ಬಿಡುಗಡೆ ಮಾಡಿದರು.

ಕನ್ನಡದಲ್ಲಿ ಆಗುತ್ತಿರುವ ಸಾಮಾನ್ಯ ತಪ್ಪುಗಳ ಕುರಿತು ಪೊ›. ಕೆ.ಎಸ್. ಕೌಜಲಗಿ, ಸುವರ್ಣ ಕರ್ನಾಟಕ ಒಂದು ಚಿಂತನೆ ಕುರಿತು - ಬಿ. ಎಸ್. ಮಾಳವಾಡ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕುರಿತು ಡಾ. ಸುಪ್ರಿಯಾ ಮಲಶೆಟ್ಟಿ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬೆಳವಣಿಗೆ ಕುರಿತು ರೂಪಾ ಜೋಶಿ ಪ್ರಬಂಧಗಳನ್ನು ಮಂಡಿಸಿದರು.

ಪ್ರಾಚಾರ್ಯು ಡಾ. ಸಿಸಿಲಿಯಾ ಡಿಕ್ರೂಜ್ ಉದ್ಘಾಟಿಸಿದರು. ರವೀಂದ್ರ ಹೊಂಬಳ, ಮಲ್ಲಿಕಾರ್ಜುನ ಕಳಸರಾಯ ಇದ್ದರು.

ಸಂಗೀತ ವಿಭಾಗ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಾಧುರಿ ಕುಲಕರ್ಣಿ ಸ್ವಾಗತಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು. ಪೊ›. ಮಹಾದೇವ ಹರಿಜನ, ಸಂವಿಧಾನ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು.

ನಿವೃತ್ತ ಪ್ರಾಚಾರ್ಯು ಡಾ. ಭಾರತಿ ಹಿರೇಮಠ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕೆಂದರು. ವಿದ್ಯಾರ್ಥಿಗಳಾದ ನವೀನ ಅಮ್ಮಿನಭಾವಿ, ಕುಸುಮಾ ಮೊರಬದ, ವಿಕಾಸ ಪಾಟೀಲ ಕಾರ್ಯಾಗಾರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ಎಸ್​ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ, ಗ್ರಾಮ ಶಿಕ್ಷಣ ಚಾರ್ಟಿ ಫೌಂಡೇಷನ್, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು, ಹುಬ್ಬಳ್ಳಿ ನಗರ ಘಟಕದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ 15ಕ್ಕೂ ಹೆಚ್ಚಿನ ಮಹಾವಿದ್ಯಾಲಯಗಳ 96 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net