ಎಸ್ ಜೆಎಂವಿ ಕಾನೂನು ಕಾಲೇಜಿನಲ್ಲಿ ಸಂಕಲ್ಪ

IMG-20251019-WA0019.jpg
Published on

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಆಶ್ರಯದಲ್ಲಿ ನೂತನವಾಗಿ ಪ್ರಾರಂಭವಾದ ಎಸ್ ಜೆಎಂವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಂಘದ ಸಂಕಲ್ಪ 2025 ಕಾರ್ಯಕ್ರಮ ಶನಿವಾರ ನಡೆಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಉಳಿದೆಲ್ಲಕ್ಕಿಂತಲೂ ಇಂದಿನ ದಿನಮಾನಗಳಲ್ಲಿ ಕಾನೂನು ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದು ಸಮಾಜಕ್ಕೆ ಅವಶ್ಯಕವೂ ಆಗಿದೆ. ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಈ ಮೊದಲು ಕೆಲವೇ ಕಾನೂನು ಕಾಲೇಜುಗಳು ಇದ್ದವು. ಇಂದು ಹೊಸದಾಗಿ ಅನೇಕ ಕಾಲೇಜುಗಳು ಆರಂಭವಾಗಿದ್ದು, ಕಾನೂನು ಶಿಕ್ಷಣ ಪಡೆಯಬೇಕೆನ್ನುವವರಿಗೆ ಅನುಕೂಲವಾಗಿವೆ. ಕಳೆದ ಎರಡು ವರ್ಷದಲ್ಲಿ ಕಾನೂನು ವಿಶ್ವವಿದ್ಯಾಲಯದ ಅಧೀನದಲ್ಲಿ 21 ಹೊಸ ಕಾಲೇಜುಗಳು ಆರಂಭವಾಗಿವೆ ಎಂದರು.

ಜೆಎಸ್ಎಸ್ ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ರೂಪಾ ಇಂಗಳಹಳ್ಳಿ ಮಾತನಾಡಿ, ಕಾನೂನು ಶಿಕ್ಷಣ ಅತ್ಯಂತ ಉಪಯುಕ್ತವಾಗಿದೆ. ಆಳ ಅಧ್ಯಯನದ ಮೂಲಕ ಪರಿಣತಿ ಹೊಂದಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್ ಜೆಎಂವಿ ಸಂಘದ ಅರವಿಂದ ಕುಬಸದ ಅವರು, ಸಂಸ್ಥೆಗೆ ಕಾನೂನು ಮಹಾವಿದ್ಯಾಲಯ ತರುವಲ್ಲಿ ಶ್ರಮಿಸಿದ ಮಹನೀಯರಿಗೆ ಅಭಿನಂದಿಸಿದರು.

ಕಾಲೇಜಿನ ಪ್ರಾಚಾರ್ಯ ಸವಿತಾ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಿಬಾ ಶೆಟ್ಟಿ ನಿರೂಪಿಸಿದರು, ಕಾವ್ಯ ಪರಿಚಯಿಸಿದರು, ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net