ಭವಿಷ್ಯದಲ್ಲಿ ಹೆಚ್ಚಾಗಲಿದೆ ಔಷಧ ತಜ್ಞರ ಬೇಡಿಕೆ

IMG-20220927-WA00166
Published on

ಚಿತ್ರದುರ್ಗ: ಭವಿಷ್ಯದಲ್ಲಿ ಔಷಧ ತಜ್ಞರಿಗೆ ಅಧಿಕ ಬೇಡಿಕೆ ಉಂಟಾಗಲಿದೆ ಎಂದು ಬೆಂಗಳೂರು ಕೆಎಎಸ್ಪಿಸಿ ಸದಸ್ಯ ಡಾ.ಎಸ್.ಎಂ.ಹಿಪ್ಪರಗಿ ಹೇಳಿದರು. ಜಿಲ್ಲಾ ಔಷಧ ಮಾರಾಟಗಾರರ ಸಂಘ,ಕರ್ನಾಟಕ ಔಷಧ ನಿಯಂತ್ರಣ ಇಲಾಖೆ, ರಾಜ್ಯಔಷಧ ಪರಿಷತ್ ಸಹಯೋಗದಲ್ಲಿ ಗುರುವಾರ ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆಯಲ್ಲಿ ಮಾತನಾಡಿ ದ ಅವರು, ಔಷಧ ತಜ್ಞರಿಗೆ ಬೇಡಿಕೆ ಇರುವುದರಿಂದ ಗುಣಮಟ್ಟದ ವಿದ್ಯಾಭ್ಯಾಸದ ಕಡೆ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದರು.

ಬೆಂಗಳೂರು ಇಲೈಟ್ ಮೆಡಿಕಲ್‌ನ ಸಂಸ್ಥಾಪಕ ರಾಜಶೇಖರ್ ಹಿರೇಮಠ ಮಾತನಾಡಿ,ಪ್ರಪಂಚದಲ್ಲೇ ಭಾರತದಲ್ಲಿ ಪ್ರತಿ ವರ್ಷಹೆಚ್ಚು ವಿದ್ಯಾರ್ಥಿಗಳು ಫಾರ್ಮಸಿ ಪದವಿ ಪಡೆಯುತ್ತಿದ್ದಾರೆ. ಆದರೆ ಹೊಸ ಅನ್ವೇಷಣೆಯಲ್ಲಿ ಭಾರತಕ್ಕೆ 43ನೇ ಸ್ಥಾನ ಲಭಿಸಿದ್ದು,ಗುಣಮಟ್ಟದ ಶಿಕ್ಷಣವನ್ನು ಕೊಡುವಲ್ಲಿ ನಾವು ಎಡವುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳಾದ ಜಿ.ರವಿಪ್ರಸಾದ್,ಗೀತಾ,ರವಿಕುಮಾರ್,ಜಿಲ್ಲಾ ಔಷಧ ತಜ್ಞರ ಮಾರಾಟಗಾರರ ಸಂಘದ ಅಧ್ಯಕ್ಷ ಓಂಕಾರಮೂರ್ತಿ,ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎಸ್.ಬಿ.ವಸ್ತ್ರಮಠ,ಪ್ರಾಂಶುಪಾಲ ಡಾ.ಟಿ.ಎಸ್.ನಾಗರಾಜ, ಎ.ವೆಂಕಟೇಶಮೂರ್ತಿ ಮತ್ತಿತರರು ಇದ್ದರು. ಸುಷ್ಮಾ ಹಾಗೂ ಲಾಲ್ ಡಿಂಗ್ಲಿಯನಿ ಕಾರ‌್ಯಕ್ರಮ ನಿರೂಪಿಸಿದರು. ಡಾ.ಸ್ನೇಹಲತಾ ಸ್ವಾಗತಿಸಿ,ಡಾ.ವೈಷ್ಣವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net