ಅಗ್ನಿಶಾಮಕ ತರಬೇತಿಗೆ ಹೆಚ್ಚಿನ ಮಹತ್ವ - ಅಗ್ನಿಶಾಮಕ ಅಧಿಕಾರಿ ಮಹಮ್ಮದ್ ಜುಲ್ಫಿಕರ್ ನವಾಝ್

mng-8aug-sjec
Published on

ಮಂಗಳೂರು : ನಗರದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮಾನವ ಸಂಪನ್ಮೂಲ ವಿಭಾಗ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಅಗ್ನಿಶಾಮಕ ತರಬೇತಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಮ್ಮದ್ ಜುಲ್ಫಿಕರ್ ನವಾಝ್.ಕೆ.ಪಿ. ಮಾತನಾಡಿ ಬೆಂಕಿ ಅಪಘಾತಗಳನ್ನು ನಿಭಾಯಿಸುವ ಜ್ಞಾನದ ಕೊರತೆಯಿಂದಾಗಿ ಮಾನವ ಜೀವ ಮತ್ತು ಆಸ್ತಿ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ
ಆಗ್ನಿಶಾಮಕ ತರಬೇತಿಗೆ ಹೆಚ್ಚಿನ ಮಹತ್ವವಿದೆ ಎಂದರು.
ಎಸ್‌ಜೆಇಸಿಯ ಮುಖ್ಯ ಆಡಳಿತಾಧಿಕಾರಿ ಡಾ.ಜಾನ್.ಇ.ಡಿಸಿಲ್ವಾ ಅವರು ತರಬೇತಿಯ ಅಗತ್ಯತೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ವ್ಯವಸ್ಥಾಪಕ ರಾಕೇಶ್ ಟಿ ಲೋಬೊ ಅವರು ತರಬೇತಿಯ ಮಹತ್ವವನ್ನು ವಿವರಿಸಿದರು. ವಿವಿಧ ಅಗ್ನಿಶಾಮಕಗಳನ್ನು ಬಳಸಿ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ನಡೆಯಿತು.
ಪಾಂಡೇಶ್ವರದ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಮತ್ತು ಬೆಳ್ತಂಗಡಿ ಅಗ್ನಿಶಾಮಕ ಅಧಿಕಾರಿ ವೆಂಕಟೇಶ್ ತರಬೇತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಲಭ್ಯವಿರುವ ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಬೆಂಕಿಯನ್ನು ನಿಭಾಯಿಸುವಲ್ಲಿ ತಮ್ಮ ಪರಿಣತಿಯನ್ನು ಹಂಚಿಕೊಂಡರು. ಎಸ್‌ಜೆಇಸಿಯ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶ್ರೀರಂಗ ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ರಾಜೇಶ ಬೆಳ್ಚಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net