ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಷಷ್ಠಿ ಸಂಪನ್ನ

7-NPK ---1
ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಷಷ್ಠಿ ಹಬ್ಬದ ಪ್ರಯುಕ್ತ ನಾಗ ಪೂಜೆಯೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.
Published on

ನಾಪೋಕ್ಲು: ಸಮೀಪದ ಪಾಲೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಷಷ್ಠಿ ಹಬ್ಬದ ಪ್ರಯುಕ್ತ ನಾಗಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ನಾಗನಕಟ್ಟೆಯಲ್ಲಿ ನಾಗನ ಪ್ರತಿಕೃತಿಗಳಿಗೆ ಹಾಲು, ಎಳನೀರು ಅಭಿಷೇಕದೊಂದಿಗೆ ವಿಶೇಷ ಪೂಜಾ ನೆರವೇರಿಸಲಾಯಿತು. ಆ ಬಳಿಕ ದೇವಾಲಯದಲ್ಲಿ ಮಹಾಪೂಜೆ ತೀರ್ಥ ಪ್ರಸಾದ ವಿತರಣೆಯ ನಂತರ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ಪೂಜಾ ವಿಧಿ ವಿಧಾನವನ್ನು ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ ನೆರವೇರಿಸಿದರು. ದೇವಾಲಯದ ಪಾರುಪತ್ತೆಗಾರ ಟಿ.ಕೆ.ಮನು, ಗಗನ್ ಮುತ್ತಪ್ಪ, ನಿರನ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ಹರಕೆ ಒಪ್ಪಿಸಿ ಭಕ್ತಿ ಪರವಶರಾದರು.

--------

7-ಎನ್ ಪಿ ಕೆ-1.

ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಷಷ್ಠಿ ಹಬ್ಬದ ಪ್ರಯುಕ್ತ ನಾಗ ಪೂಜೆಯೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.

-------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net