ಕಾಲುಬಾಯಿ ರೋಗ ನಿರ್ಮೂಲನೆ, ಜಾನುವಾರು ರಕ್ಷಣೆಗೆ 6 ನೇ ಸುತ್ತಿನ ಲಸಿಕಾ ಅಭಿಯಾನ

IMG_20241018_210615.jpg
Published on

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನವನ್ನು ಅ.21 ರಿಂದ ನ.20 ರವರೆಗೆ ಕೈಗೊಳ್ಳಲಾಗಿದೆ.
ಕಳೆದ ಏಪ್ರಿಲ್ ಮತ್ತು ಮೇನಲ್ಲಿ 5ನೇ ಸುತ್ತಿನ ಲಸಿಕಾ ಅಭಿಯಾನದ ಯಶಸ್ವಿಯಾಗಿ ನಡೆದಿದ್ದು ಉತ್ತಮ ಸಾಧನೆ ತೋರಲಾಗಿದೆ. ಈಗ ಹೊಸದಾಗಿ ಕೈಗೊಳ್ಳುತ್ತಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಪೂರ್ವದಲ್ಲಿ ಭೌತಿಕ ಜಾನುವಾರುಗಳ ಸರ್ವೆ ಪ್ರಕ್ರಿಯೆ ಮುಗಿಸಲಾಗಿದೆ.
2002 ರಿಂದ 2019 ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40 ಅನುಪಾತದ ಅನುದಾನದಲ್ಲಿ 17 ಸುತ್ತಿನ ಲಸಿಕಾ ಅಭಿಯಾನ, ಬಳಿಕ ಕೇಂದ್ರದ ಶೇ.100 ರ ಅನುದಾನದಲ್ಲಿ 5 ನೇ ಹಂತದ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ. ಇದೀಗ 6 ನೇ ಹಂತದ ಅಭಿಯಾನವನ್ನು 30 ದಿನ ನಡೆಯಲಿದೆ.


*ಕಾಲುಬಾಯಿ ರೋಗ*
ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಪ್ರತಿ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಬೇಕು. ಈ ಸಾಂಕ್ರಾಮಿಕ ಕಾಯಿಲೆಯು ದನ, ಎಮ್ಮೆ, ಹಂದಿ,ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ ಸೇರಿದಂತೆ ಸೀಳು ಗೊರಸುಳ್ಳ ಎಲ್ಲ ಪ್ರಾಣಿಗಳಲ್ಲಿ ಕಂಡು ಬರುತ್ತಿದೆ. ಇದರ ವೈರಾಣುವಿನಿಂದ ಬರುವ ಕಾಯಿಲೆ. ಗಾಳಿಯ ಮೂಲಕ ಹರಡುತ್ತದೆ. ಈ ರೋಗದಿಂದ ರಾಸುಗಳಲ್ಲಿ ನಿಶ್ಯಕ್ತಿ ಹೆಚ್ಚಾಗಿ, ಹಾಲಿನ ಇಳುವರಿ ಕಡಿಮೆಯಾಗುತ್ತದೆ. ರಾಸು ಮೃತಪಟ್ಟು ರೈತರಿಗೆ ನಷ್ಟ ಉಂಟಾಗುತ್ತದೆ.  

*ಅಭಿಯಾನ ಯಶಸ್ವಿಗೊಳಿಸಲು ಸಲಹೆ*
ಕಾಲುಬಾಯಿ ಜ್ವರದ ನಿಮೂರ್ಲನೆಗಾಗಿ ಕಡ್ಡಾಯವಾಗಿ ರಾಸುಗಳಿಗೆ ಲಸಿಕೆ ಹಾಕಿಸಬೇಕು. ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಚಿಕ್ಕಯ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಭಿಯಾನದ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಜಾನುವಾರು ಮಾಲೀಕರು ಅಭಿಯಾನವನ್ನು ಬಳಸಿಕೊಂಡು, ಜಾನುವಾರುಗಳನ್ನು ಕಾಲು ಬಾಯಿ ಜ್ವರ ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಎನ್.ರಂಗಪ್ಪ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಲಕ್ಷ್ಮಣ್, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ಎಂ.ಎನ್.ಚೆನ್ನಕೇಶವರೆಡ್ಡಿ, ಡಾ. ಬಿ.ಕೆ.ರಮೇಶ್, ಡಾ.ಮಾರುತಿ, ತಾಂತ್ರಿಕ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಸ್.ಎಂ. ಶೀಲಾ, ಕೋಚಿಮುಲ್ ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಡಿ.ಕೆ.ಶಿವಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net