ಆರು ವರ್ಷದ ಬಾಲಕಿ ಮೇಲೆ ನಾಯಿ ದಾಳಿ, ಖಾಸಗಿ ಆಸ್ಪತೆಗೆ ದಾಖಲು

girl hospitaliged on dog attack
ನಾಯಿ ದಾಳಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಬಾಲಕಿ ಬೇಬಿ.
Published on

ಶಿವಮೊಗ್ಗ: ತಾಲೂಕಿನ ಬಿ. ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬೆಳಗಲು ಗ್ರಾಮದಲ್ಲಿ ಆರು ವರ್ಷದ ಬಾಲಕಿ ಮೇಲೆ ನಾಯಿವೊಂದು ದಾಳಿ ಮಾಡಿದ್ದು ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ.

ಹೊಳೆಬೆಳಗಲು ಗ್ರಾಮದ ನಂಜುಂಡಪ್ಪ ಮತ್ತು ವಾಣಿ ದಂಪತಿಯ ಪುತ್ರಿ ಬೇಬಿ ಗಾಯಗೊಂಡ ಬಾಲಕಿ. ಶುಕ್ರವಾರ ಸಂಜೆ ಶಾಲೆಯಿಂದ ವಾಹನದಲ್ಲಿ ಗ್ರಾಮಕ್ಕೆ ಬಂದುಳಿದು ಮನೆಗೆ ತೆರಳುವಾಗ ಬಾಲಕಿ ಮೇಲೆ ದಾಳಿ ಮಾಡಿದ್ದು ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ ಪಾಲಕರಿಗೆ ವಿಷಯ ತಿಳಿಸಿದ್ದಾರೆ.
ಅದಕ್ಕೂ ಮುನ್ನ ಇಬ್ಬರು ಮಕ್ಕಳು ಮತ್ತು ಮೂವರು ವಯಸ್ಕರ ಮೇಲೂ ದಾಳಿ ಮಾಡಿದೆ. ನಾಯಿಗೆ ಹುಚ್ಚು ಹಿಡಿದಿದೆ ಎನ್ನಲಾಗಿದೆ. ನಾಯಿಯಿಂದ ಕಚ್ಚಿಕೊಂಡ ಕೆಲವರು ಮೆಗ್ಗಾನ್ ಆಸ್ಪತ್ರೆ ಹಾಗೂ ಮತ್ತೆ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಘಟನೆ ಬಗ್ಗೆ ಮಗುವಿನ ಪಾಲಕರು ಹಾಗೂ ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹುಚ್ಚು ಹಿಡಿದಿರುವ ನಾಯಿಯನ್ನು ಸೆರೆ ಹಿಡಿದು ಗ್ರಾಮದಲ್ಲಿರುವ ಮಕ್ಕಳ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net