ಆರು ದಿನಕ್ಕೊಮ್ಮೆ ನೀರು ಬಿಡಲು ಸಿಂಧನೂರು ನಗರಸಭೆ ಸಾಮಾನ್ಯಸಭೆಯಲ್ಲಿ ನಿರ್ಧಾರ

Sindhanuru Muncipalty General Meeting
ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜ್‌ಹುಸೇನ , ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಪಾಲ್ಗೊಂಡಿದ್ದರು.
Published on

ಸಿಂಧನೂರು: ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನ್ನೆಚ್ಚರಿಕೆ ಕ್ರಮವಾಗಿ ಏ.1ರಿಂದ ಆರು ದಿನಕ್ಕೊಮ್ಮೆ ಕುಡಿವ ನೀರು ಪೂರೈಸಲು ನಗರಸಭೆ ತೀರ್ಮಾನ ಕೈಗೊಂಡಿದೆ.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಪೌರಾಯುಕ್ತ ವಿರೂಪಾಕ್ಷಮೂರ್ತಿ ಮಾತನಾಡಿ, ಈಗ ನಾಲ್ಕು ದಿನಕ್ಕೊಮ್ಮೆ ಪೂರೈಕೆ ಮಾಡಲಾಗುತ್ತಿದೆ. ದಿನವೊಂದಕ್ಕೆ 15 ಮಿಲಿಯನ್ ಲೀಟರ್ (ಎಂಎಲ್) ನೀರು ಕೊಡಲಾಗುತ್ತಿದೆ. ಇದರಲ್ಲಿ ಮೂರು ಎಂಎಲ್ ಆವಿಯಾಗುತ್ತದೆ. 12 ಎಂಎಲ್ ಮಾತ್ರ ಬಳಕೆಯಾಗುತ್ತಿದೆ. ನಮ್ಮ ಕೆರೆಗಳಲ್ಲಿ 1866.15 ಎಂಎಲ್ ನೀರಿದ್ದು, 126 ದಿನಗಳಷ್ಟು ಪೂರೈಸಬಹುದು. ಜುಲೈವರೆಗೆ ನೀರಿನ ಸಮಸ್ಯೆಯಾಗುವುದಿಲ್ಲ. ಆಗಸ್ಟ್‌ವರೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬರುವುದಿಲ್ಲ. ಆದ್ದರಿಂದ ಆರು ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ ಮಾಡಿದರೆ ಉತ್ತಮ ಎಂದರು.

ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ವಹಿಸುವುದು ಅಗತ್ಯ. ನಿಮ್ಮೆಲ್ಲರ ಒಪ್ಪಿಗೆ ಮೇರೆಗೆ ನಿರ್ಧಾರ ಕೈಗೊಳ್ಳಬೇಕಿದೆ. ಏ.1ರಿಂದ ಆರು ದಿನಕ್ಕೊಮ್ಮೆ ನೀರು ಪೂರೈಸಿದರೆ ಅನುಕೂಲವಾಗಲಿದೆ ಎಂದರು. ಶೇಖರಪ್ಪ ಗಿಣಿವಾರ, ವಿರೂಪಾಕ್ಷಮೂರ್ತಿ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಮುರ್ತುಜ್‌ಹುಸೇನ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net