

ಕಂಪ್ಲಿ: ತಹಸೀಲ್ದಾರ್ ಎಸ್.ಶಿವರಾಜ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪಟ್ಟಣದ ಅಂಗಡಿ, ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ಮಾಡಿ, ಬಾಲಕಿ ಸೇರಿ ಅಪ್ರಾಪ್ತ ಆರು ಮಕ್ಕಳನ್ನು ಶುಕ್ರವಾರ ರಕ್ಷಣೆ ಮಾಡಿದರು.
ಇದನ್ನೂ ಓದಿ:
ಬಳ್ಳಾರಿ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಎ.ಮೌನೇಶ್ ಮಾತನಾಡಿ, ಪೆಟ್ರೋಲ್‌ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಕ್ಕಳು, ಹೋಟೆಲ್, ಬಟ್ಟೆ ಅಂಗಡಿಗಳಲ್ಲಿ ತಲಾ ಒಬ್ಬರು, ಕಿರಾಣಿಶಾಪ್‌ನಲ್ಲಿ ಇಬ್ಬರು ಸೇರಿ ಶಾಲೆ ಬಿಟ್ಟ ಆರು ಮಕ್ಕಳನ್ನು ರಕ್ಷಿಸಲಾಗಿದೆ.
ಮಾಲೀಕರಿಗೆ ನೋಟಿಸ್ ನೀಡಿದ್ದು, ಶಾಲಾ ದಾಖಲಾತಿ ಸಂಗ್ರಹಿಸಿದ ನಂತರ ಪ್ರಕರಣ ದಾಖಲಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಜಿಲ್ಲಾದ್ಯಂತ ಅಪ್ರಾಪ್ತರನ್ನು ದುಡಿಸಿಕೊಳ್ಳುತ್ತಿದ್ದ 22 ಪ್ರಕರಣ ದಾಖಲಿಸಿ, ತಲಾ 20 ಸಾವಿರ ರೂ. ಪರಿಹಾರ ವಸೂಲಿ ಮಾಡಿದೆ.
ಶಾಲೆಬಿಟ್ಟ ಮಕ್ಕಳ ಪಟ್ಟಿಯನ್ನು ಶಿಕ್ಷಣ ಇಲಾಖೆಗೆ ಕಡ್ಡಾಯವಾಗಿ ಟಾಸ್ಕ್‌ಫೋರ್ಸ್ ಸಮಿತಿ, ಶಾಲೆಬಿಟ್ಟ ಮಕ್ಕಳನ್ನು ಶಾಲೆವ್ಯಾಪ್ತಿಗೆ ಕರೆತರಲು ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರಿವಹಿಸಿಕೊಳ್ಳುವಂತೆ, ಶಾಲೆಗೆ ಬಂದಿರುವ ಮಕ್ಕಳ ಹಾಜರಾತಿ ಮಾತ್ರ ಹಾಕುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದೆ ಎಂದರು.
ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ, ಅಧಿಕಾರಿಗಳಾದ ಆರ್.ಕೆ.ಶ್ರೀಕುಮಾರ್, ಕೆ.ದುರುಗಣ್ಣ, ಟಿ.ಎಂ.ಬಸವರಾಜ, ಪಿ.ಬಸವರಾಜ, ಕೆ.ವಿರೂಪಾಕ್ಷಿ, ಶೋಭಾ, ಲತೀಫಾ ಬೇಗಂ, ಬಿ.ಬಸವರಾಜ, ಲಕ್ಷ್ಮೀದೇವಿ, ಚಂದ್ರಕಲಾ ಇತರರಿದ್ದರು.