

ಕೊಪ್ಪ: ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಡುವ ವೀರಭದ್ರ ದೇವಸ್ಥಾನದಲ್ಲಿ ಶನಿವಾರ ದಸರಾ ನಿಮಿತ್ತ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಬು ಹೊಡೆಯುವ ಸಂಪ್ರದಾಯ ನಡೆಯುತ್ತಿದ್ದ ವೇಳೆ ಕೋವಿ ಮಿಸ್‌ೈರ್ ಆಗಿ ಆರು ಜನರಿಗೆ ಗಾಯವಾಗಿದೆ.
ಅಂಬು ಹೊಡೆಯುವ ವೇಳೆಯಲ್ಲಿ ಶಯನ ಎಂಬುವವರು ಕೋವಿಗೆ ಮದ್ದು ತುಂಬಿಸಿ ನೆಲ ಮುಖವಾಗಿ ಟ್ರಿಗರ್ ಎಳೆದಿದ್ದಾರೆ. ಈ ವೇಳೆ ಮದ್ದು ಏಕಾಏಕಿ ಸಿಡಿದ ಕಾರಣ ಸಮೀಪದಲ್ಲಿಯೇ ಇದ್ದ ನಾಲ್ವರಿಗೆ ಗಾಯವಾಗಿದೆ. ಪಾಂಡುರಂಗ, ಅನುಷಾ, ಶ್ರೇಷ್ಠ್ಠಾ, ಶ್ರೇಯಸ್ಸು, ಸುಮಾ, ಆಶಾ ಎಂಬುವವರಿಗೆ ಗಾಯವಾಗಿದೆ. ಕೆಲವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಯನಾ, ಶ್ರೀನಿವಾಸ ಶೆಟ್ಟಿ ಹಾಗೂ ರಮೇಶ್ ಶೆಟ್ಟಿ ಎಂಬುವವರ ವಿರುದ್ಧ ಪೊಲೀಸರು ಎ್ಐಆರ್ ದಾಖಲಿಸಿಕೊಂಡಿದ್ದಾರೆ.